ಬೆಂಗಳೂರು: ಕಾಡು ಮಲ್ಲೇಶ್ವರ ಬಳಗದಿಂದ ನ.12ರಿಂದ 14ರವರೆಗೆ ಮೂರು ದಿನಗಳ ಕಾಲ ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ 6ನೇ ವರ್ಷದ ಕಡಲೆಕಾಯಿ ಪರಿಷೆ ನಡೆಯಲಿದೆ.

‘ನಗರದ ಜನರಿಗೆ ಗ್ರಾಮೀಣ ಸಂಸ್ಕೃತಿ, ಜೀವನ ಪದ್ಧತಿಯನ್ನು ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ಕಡಲೆಕಾಯಿ ಪರಿಷೆ ಆಯೋಜಿಸಲಾಗುತ್ತಿದೆ. ಕಾರ್ತಿಕ ಮಾಸದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಪರಿಷೆ ನಡೆಯಲಿದೆ’ ಎಂದು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ತಿಳಿಸಿದರು.

‘ಆಧುನಿಕ ಬದುಕಿನಲ್ಲಿ ಜಾತ್ರೆ, ಸಂತೆ ಕಣ್ಮರೆಯಾಗುತ್ತಿದ್ದು, ಇದರಿಂದ ಕೃಷಿಕರು ಬೆಳೆದ ವಸ್ತುಗಳ ಮಾರಾಟ ಕಡಿಮೆಯಾಗಿದೆ. ಈ ಬಾರಿ ಆಯೋಜಿಸಿರುವ ಪರಿಷೆಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ರೈತರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಇದಕ್ಕಾಗಿ 400 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಲ್ಲೇಶ್ವರ 8ನೇ ಕ್ರಾಸ್‌ನಿಂದ 16ನೇ ಕ್ರಾಸ್‌ವರೆಗೂ ರೈತರು ತಾವು ಬೆಳೆದ ಕಡಲೆಕಾಯಿ, ಅವರೆಕಾಯಿ ಮಾರಾಟ ಮಾಡಲು, ಮಂಡ್ಯ ರೈತರಿಗೆ ಬೆಲ್ಲದ ಅಂಗಡಿ ತೆರೆಯಲು, ಎಲ್ಲಾ ಕೃಷಿ ಉತ್ಪನಗಳು ಸೇರಿ ವಿವಿಧ ಉತ್ಪನ್ನಗಳನ್ನು ಮಾರಾಟಕ್ಕೆ ಮಾಡಲು ಅವಕಾಶವಿದೆ. ಕಾಡು ಮಲ್ಲೇಶ್ವರದ ದೇವಸ್ಥಾನದಲ್ಲಿ ಕಡಲೆಕಾಯಿಯಿಂದ ಅಲಂಕಾರ ಮಾಡಲಾಗುತ್ತಿದೆ. ಈ ಬಾರಿ ಪರಿಷೆಯಲ್ಲಿ ದೇಶೀಯ ಗೂಳಿಗಳು ಆಕರ್ಷಿಸಲಿವೆ. ಆಂಧ್ರಪ್ರದೇಶದ ಓಂಗೋಲ್‌ನಿಂದ ಎರಡು ದೇಶೀಯ ಗೂಳಿಗಳನ್ನು ತರಲಾಗಿದೆ. ಈ ಗೂಳಿಗಳನ್ನು ಕಾಡು ಮಲ್ಲೇಶ್ವರದಲ್ಲಿ ಸಾಕಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಸಾಮಾಜಿಕ ಕಾರ್ಯಕರ್ತ ಅನೂಪ ಅಯ್ಯಂಗಾರ್, ಕಾಡು ಮಲ್ಲೇಶ್ವರ ದೇವಸ್ಥಾನ ಬಳಗದ ಕಾರ್ಯಕರ್ತ ಚಂದ್ರಶೇಖರ ನಾಯ್ಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.