ಬೆಂಗಳೂರು:‘ಕನ್ನಡದ ಬಹುಮುಖ ಪ್ರತಿಭೆಯ ಸಾಹಿತಿಯಾಗಿದ್ದ ಯು.ಆರ್. ಅನಂತಮೂರ್ತಿ ಅವರು ಬದುಕಿನುದ್ದಕ್ಕೂ ವಿವಾದಗಳನ್ನೇ ಎದುರಿಸಬೇಕಾಯಿತು. ಅವರುಮೃತಪಟ್ಟ ಬಳಿಕ ಅಂತ್ಯ ಸಂಸ್ಕಾರದ ವಿಚಾರದಲ್ಲೂ ವಿವಾದ ಸೃಷ್ಟಿಯಾಗಿದ್ದು ವಿಪರ್ಯಾಸ’ ಎಂದು ಲೇಖಕ ಆರ್.ಜಿ. ಹಳ್ಳಿ ನಾಗರಾಜ್ ಬೇಸರ ವ್ಯಕ್ತಪಡಿಸಿದರು.

ಅನಂತಮೂರ್ತಿ ಅವರ 90ನೇ ಹುಟ್ಟುಹಬ್ಬದ ಪ್ರಯುಕ್ತರಂಗೋತ್ರಿ ಸಾಂಸ್ಕೃತಿಕ ಸಂಸ್ಥೆ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಗರಾಜ್ ಮಾತನಾಡಿದರು.

‘ಅನಂತಮೂರ್ತಿ ಅವರು ತಮಗೆ ಅನಿಸಿದ್ದನ್ನು ನೇರವಾಗಿಯೇ ಹೇಳುತ್ತಿದ್ದರು. ಸಮಾಜವಾದಿ ಚಿಂತನೆಗಳಿಂದ ಪ್ರೇರೇಪಿತರಾಗಿದ್ದ ಅವರು, ರಾಜಕೀಯ, ಸಾಹಿತ್ಯ, ಸಂಸ್ಕೃತಿಯನ್ನು ವಿಮರ್ಶೆಗೆ ಒಳಪಡಿಸುತ್ತಿದ್ದರು. ಅವರ ‘ಸಂಸ್ಕಾರ’, ‘ಅವಸ್ಥೆ’ ಕಾದಂಬರಿಗಳ ವಸ್ತುಗಳೂ ವಿವಾದಕ್ಕೆ ಕಾರಣವಾದವು. ಸಿನಿಮಾ ಆಗಿಯೂ ಅವು ಸದ್ದು ಮಾಡಿದ್ದವು’ ಎಂದು ನೆನಪಿಸಿಕೊಂಡರು.

‘ಕವಿತೆ, ಸಣ್ಣಕತೆ, ವಿಮರ್ಶೆಯಲ್ಲಿ ಸಾಧನೆ ಮಾಡಿದ ಅವರಿಗೆ ಬದುಕಿನುದ್ದಕ್ಕೂ ವಿವಾದಗಳೇ ಸುತ್ತುವರೆದಿದ್ದವು. ಅವರು ಪಡೆದ ಜ್ಞಾನಪೀಠ ಪ್ರಶಸ್ತಿ, ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ, ಕೇರಳ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಸ್ಥಾನ ಸೇರಿದಂತೆ ವಿವಿಧ ಗೌರವಗಳೂಚರ್ಚೆಗೆ ಗ್ರಾಸವಾಗಿದ್ದವು. ಸದಾ ಸುದ್ದಿಯಲ್ಲಿರುತ್ತಿದ್ದ ಅವರು, ಕನ್ನಡದ ಅಸ್ಮಿತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು’ ಎಂದು ಹೇಳಿದರು.

ಕವಿ ವಡ್ಡಗೆರೆ ನಾಗರಾಜಯ್ಯ, ‘ಕಲಾಗ್ರಾಮದಲ್ಲಿರುವಜಿ.ಎಸ್.ಶಿವರುದ್ರಪ್ಪ, ಅನಂತಮೂರ್ತಿ ಹಾಗೂ ಸಿದ್ದಲಿಂಗಯ್ಯ ಅವರ ಸಮಾಧಿಗಳು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ಸ್ಥಳವನ್ನು ‘ಕವಿ ವನ’ ಎಂದು ಘೋಷಿಸಿ, ಅಲ್ಲಿ ವಸ್ತು ಸಂಗ್ರಹಾಲಯ ಮತ್ತು ಸಭಾಂಗಣ ನಿರ್ಮಿಸಬೇಕು. ಚಿತ್ರ ನಟರಿಗೆ ಸಿಗುವ ಗೌರವ ಹಾಗೂ ಸ್ಥಾನಮಾನ ಸಾಹಿತಿಗಳಿಗೂ ಸಿಗಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.