ಬೆಂಗಳೂರು:ತುರ್ತು ಆರೋಗ್ಯ ಸೇವೆಗಾಗಿಬೆಂಗಳೂರಿನ ಕಣ್ವ ಶ್ರೀ ಸಾಯಿ ಆಸ್ಪತ್ರೆಯು ಸುಸಜ್ಜಿತವಾದ ‘ಕಣ್ವ ಎಮರ್ಜೆನ್ಸಿ ಆಂಬುಲೆನ್ಸ್ ಸೇವೆ‘ಯನ್ನು ಆರಂಭಿಸಿದೆ.

ಇತ್ತೀಚೆಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯಂದು ಈ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ. ಅಫಘಾತ ಸೇರಿದಂತೆ, ಎಲ್ಲ ರೀತಿಯ ತುರ್ತು ಆರೋಗ್ಯ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ಈ ಸೇವೆ ಆರಂಭಿಸಿರುವುದಾಗಿ ಸಂಸ್ಥೆ ತಿಳಿಸಿದೆ.

ಯಾವುದೇ ತುರ್ತು ಆರೋಗ್ಯ ಸಮಸ್ಯೆ ಇದ್ದವರು ಕಣ್ವ ಆಂಬುಲೆನ್ಸ್ ಸರ್ವೀಸ್‌ಗೆ ಕರೆ ಮಾಡಿದರೆ, ನಮ್ಮ ಆಂಬುಲೆನ್ಸ್ ಜಾಲದ ಮುಖಾಂತರ 10 ರಿಂದ 15 ನಿಮಿಷಗಳೊಳಗೆ ರೋಗಿಗಳ ಇರುವ ಕಡೆಗೆ ಆಂಬುಲೆನ್ಸ್ ಕಳಿಸಿಕೊಡಲಾಗುತ್ತದೆ. ಅಲ್ಲಿಂದ ರೋಗಿಯನ್ನು ಸೂಕ್ತ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಇದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಒಂದೊಮ್ಮೆ ರೋಗಿಯು ಕಣ್ವ ಆಸ್ಪತ್ರೆ ದಾಖಲಾಗಲು ಇಚ್ಛಿಸಿದರೆ, ಅಂಥವರಿಗೆ ಆಂಬುಲೆನ್ಸ್‌ಗೆ ತಗಲುವ ವೆಚ್ಚದಿಂದ ವಿನಾಯಿತಿ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ. www.kanvasrisaihospital.com

ಕಣ್ವ ಎಮರ್ಜೆನ್ಸಿ ಆಂಬ್ಯುಲೆನ್ಸ್ ಸಹಾಯ ವಾಣಿ: 80953 33933/ 080 2337 5143.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.