ಬೆಂಗಳೂರು: ನಂದಿನಿ ಬ್ರ್ಯಾಂಡಿನ ಹಾಲಿನ ಉತ್ಪನ್ನಗಳ ಪಟ್ಟಿಯಲ್ಲಿ ಈಗ ಗುಡ್ಲೈಫ್ ಬ್ರೆಡ್ ಕೂಡ ಸೇರ್ಪಡೆಗೊಂಡಿದ್ದು, ಮಾರುಕಟ್ಟೆಗೆ ಶುಕ್ರವಾರ ಬಿಡುಗಡೆಗೊಂಡಿವೆ.

ಗುಡ್ ಲೈಫ್ ಮಿಲ್ಕ್ ಬ್ರೆಡ್, ಗುಡ್ ಲೈಫ್ ಸ್ಯಾಂಡ್ವಿಚ್ ಬ್ರೆಡ್, ಗುಡ್ ಲೈಫ್ ವೋಲ್ ವ್ಹೀಟ್ ಬ್ರೆಡ್ ಮತ್ತು ಗುಡ್ ಲೈಫ್ ಮಲ್ಟಿ ಗ್ರೈನ್ ಬ್ರೆಡ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಸದ್ಯಕ್ಕೆ ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಾತ್ರ ಈ ನಾಲ್ಕು ಮಾದರಿಯ ಬ್ರೆಡ್ ಲಭ್ಯವಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.

ನಂದಿನಿ ಬ್ರ್ಯಾಂಡಿನ ಅಡಿಯಲ್ಲಿ 170ಕ್ಕೂ ಹೆಚ್ಚು ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಿದ್ದು, ಗ್ರಾಹಕರ ಅಭಿರುಚಿ ಪರಿಗಣಿಸಿ 2021ನೇ ವರ್ಷದಲ್ಲೂ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದೆ.

ನಂದಿನಿ ಬ್ರೆಡ್ನ ವಿವಿಧ ಮಾದರಿಯ 200 ಗ್ರಾಂ ಬ್ರೆಡ್ ಪ್ಯಾಕ್ಗಳಿಗೆ ₹22ರಿಂದ ₹30 ಗರಿಷ್ಠ ಮಾರಾಟ ದರ ನಿಗದಿ ಮಾಡಲಾಗಿದೆ. 400 ಗ್ರಾಂ ಪ್ಯಾಕ್ಗೆ ₹40ರಿಂದ ₹50ರವರೆಗೆ ಮಾರಾಟ ದರ ನಿಗದಿ ಮಾಡಲಾಗಿದೆ ಎಂದು ಕೆಎಂಎಫ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.