ಬೆಂಗಳೂರು: ಹೊಸ ತಿಪ್ಪಸಂದ್ರ ವಾರ್ಡ್ನಲ್ಲಿ ಕಳೆದ ಅಕ್ಟೋಬರ್ 15ರಂದು ರಾಜಕಾಲುವೆಯು ಕೊಳಗೇರಿ ವಾಸಿ ನರಸಮ್ಮಳ ಜೀವ ನುಂಗಿತ್ತು. ಕಾಲುವೆ ಬದಿ ತಂತಿಬೇಲಿ ಹಾಕುವುದಾಗಿ ಆಡಳಿತ ವರ್ಗಆಗ ಹೇಳಿತ್ತು. ಹೇಳಿದ ಮಾತಿನಂತೆ ನಡೆಯದ ಕಾರಣ ಈ ಕಾಲುವೆ ಇಂದಿಗೂ ಮತ್ತೊಂದು ಬಲಿಗೆ ಬಾಯಿ ತೆರೆದುಕೊಂಡೇ ಇದೆ.

ಏನಾಗಿತ್ತು ಆ ದಿನ:ಅಕ್ಟೋಬರ್ 15ರ ನಸುಕು. ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಹೊಸ ತಿಪ್ಪಸಂದ್ರ ವಾರ್ಡ್ನ ಕೃಷ್ಣಪ್ಪ ಗಾರ್ಡನ್ ಕೊಳಗೇರಿಯ ನಿವಾಸಿ ನರಸಮ್ಮ (18) ಬಹಿರ್ದೆಸೆಗೆ ಹೋಗಿದ್ದರು. ರಾಜಕಾಲುವೆಯ ಅಂಚಿನಲ್ಲಿ ಶೌಚಕಾರ್ಯ ಮುಗಿಸಿ, ಮೇಲೇಳುತ್ತಿದ್ದಾಗ ಆಯತಪ್ಪಿ ಬಿದ್ದರು. ರಾತ್ರಿ ಬಿದ್ದ ಮಳೆಗೆ ಕಾಲುವೆಯಲ್ಲಿ ಭೋರ್ಗರೆಯುತ್ತಿದ್ದ ನೀರು ಆಕೆಯನ್ನು ಅರ್ಧ ಕಿ.ಮೀ. ವರೆಗೆ ಎಳೆದುಕೊಂಡು ಹೋಯಿತು. ಉಸಿರುಗಟ್ಟಿ ಆಕೆಯ ಪ್ರಾಣವೂ ಹಾರಿಹೋಯಿತು.

ಬೆಳಗಿನ ಹತ್ತರ ಹೊತ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಪರಿಹಾರ ಧನ ಘೋಷಿಸಿದರು. ಮತ್ತೆ ಇಂತಹ ದುರ್ಘಟನೆ ನಡೆಯದಂತೆ ಮೋರಿ ಮೇಲೆ ಸ್ಲ್ಯಾಬ್ಗಳನ್ನು ಹಾಕಿಸುತ್ತೇವೆ. ಬದಿಯಲ್ಲಿ ತಂತಿಬೇಲಿ ಹಾಕುತ್ತೇವೆ. ಶೌಚಾಲಯಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿ ಹೋದರು.

ಈವರೆಗೂ ಅವರು ಭರವಸೆಗಳನ್ನು ಈಡೇರಿಸಿಲ್ಲ. ಹಾಗಾಗಿ ಐ.ಟಿ. ಖ್ಯಾತಿಯ ಬಾಗ್ಮನೆ ಟೆಕ್ಪಾರ್ಕ್ನ ಹಿಂಬದಿಯಲ್ಲಿರುವ ಈ ಕೊಳಗೇರಿಯ ಜನರ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಸದ್ಯದ ಸ್ಥಿತಿ:ಬಾಗ್ಮನೆ ಕೆರೆಯಿಂದ ಕಗ್ಗದಾಸಪುರದ ಕೆರೆಗೆ ನೀರು ಹರಿಸಲು ಕೃಷ್ಣಪ್ಪ ಗಾರ್ಡನ್ನಲ್ಲಿ ರಾಜಕಾಲುವೆ ಹಾದುಹೋಗಿದೆ. ಸ್ಥಳೀಯರ ಒತ್ತುವರಿಯಿಂದಾಗಿ ಅದೀಗ ಮೋರಿಯಾಗಿ ಮಾರ್ಪಟ್ಟಿದೆ. ಈ ಮೋರಿಯ ಒಂದು ಬದಿಯ ಕಟ್ಟೆಯ ಮೇಲೆಯೇ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಸ್ಥಳೀಯ ಕೊಳಗೇರಿಯ ವಾಸಿಗಳು ಶೌಚಕಾರ್ಯಕ್ಕೆ ಈ ಮೋರಿಯ ಮತ್ತೊಂದು ಬದಿಯ ಅಂಚನ್ನೇ ಬಳಸುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಆಯತಪ್ಪಿ ಈ ಮೋರಿಗೆ ಬಿದ್ದು ಗಾಯಗೊಳ್ಳುವ ಘಟನೆಗಳು ಆಗಾಗ ಘಟಿಸುತ್ತಲೇ ಇರುತ್ತವೆ ಅಂತಾರೆ ಸ್ಥಳೀಯರು.

ಕಾಲುವೆಗೆ ಕಸ:300ಕ್ಕೂ ಹೆಚ್ಚು ಶೆಡ್ಗಳಿರುವ ಈ ಕೊಳಗೇರಿಯ ಒಂದೂವರೆ ಸಾವಿರ ಜನರ ದಿನೋತ್ಪತ್ತಿಯ ಕಸವೂ ಈ ಕಾಲುವೆ ಬದಿಯಲ್ಲೇ ರಾಶಿ ಬಿದ್ದಿದೆ. ಮಳೆನೀರಿನ ಹರಿವಿನಿಂದ ಅದು ಕಾಲುವೆಗೂ ಸೇರುತ್ತಿದೆ. ಇದರಿಂದ ಗಲೀಜು ಹೆಚ್ಚಾಗಿ ನೋಣ, ಸೊಳ್ಳೆಗಳ ಸಂತತಿ ಹೆಚ್ಚುತ್ತಿದೆ. ರೋಗ ರುಜಿನೆಗಳು ಹರಡುತ್ತವೆ. ಕೊಳಗೇರಿಯ ಜನರು ಕೂಲಿ–ನಾಲಿ ಮಾಡಿ ಕೂಡಿಟ್ಟ ಒಂದಿಷ್ಟು ಹಣವನ್ನೂ ಕ್ಲಿನಿಕ್ಗಳಿಗೆ ಸುರಿಯುವಂತಾಗಿದೆ.

‘ಸಂಡಾಸ್ ಹೋಗಾಕ ನಮಗ ಬಾಳ್ ತ್ರಾಸ ಆಗೈತ್ರಿ. ಮೋರಿ ಮ್ಯಾಗ್ ಕುಂತ್ರೂ ಆಜುಬಾಜಿನ ಜನ ಬೈತಾರ. ಹೊತ್ತು ಹೊಂಡೊ ಮುಂಚೆ, ರಾತ್ರಿ ಆದ ಮ್ಯಾಲೆ ಹೆಣ್ಮಕ್ಕಳು ತಂಬಿಗೆ ತಗೊಂಡು ಹೋಗಿ ಬರ್ತಾರ. ನಮ್ಗ ಪಾಯಿಖಾನಿ ಕಟ್ಟಿಸಿ ಕೊಟ್ರ ಬಾಳ್ ಅನುಕೂಲ ಆಗ್ತೈತಿ’ ಎಂದು ರಾಯಚೂರಿನಿಂದ ಕೂಲಿ ಅರಸಿ ಬಂದಿರುವ ಬಸಮ್ಮ ಹೇಳಿದರು.

ಮಳಿ ಬಂದ್ರ ನಮ್ ಇಡೀ ಏರಿಯಾದ ದಾರಿತುಂಬ ಕೆಸ್ರೆ ತುಂಬತಾದ. ಇಲ್ಲಿನ ಯಾವ ಸೆಡ್ಗೂ ಕರೆಂಟ್ ಕನೆಕ್ಷನ್ ಇಲ್ಲ.ಮಕ್ಕಳು ರಾತ್ರಿ ಓದ್ಲಾಕೂ ಆಗಲ್ಲ.
–ಯಂಕಪ್ಪ, ಸ್ಥಳೀಯ

ಮೂಲಸೌಕರ್ಯಕ್ಕೆ ಅಡ್ಡಿಯಾಗಿದೆ ಭೂವಿವಾದ
‘ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಜಮೀನಿನಲ್ಲಿ ಕೊಳಗೇರಿಯಿದೆ. ಸದ್ಯ ಈ ಜಮೀನಿನ ಒಡೆತನದ ಕುರಿತು ಬಿಇಎಂಎಲ್ ಮತ್ತು ಖಾಸಗಿ ವ್ಯಕ್ತಿಯೊಬ್ಬರ ನಡುವಿನ ವಿವಾದದ ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಾಗಿ ಇಲ್ಲಿನ ಜನರಿಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬಿಇಎಂಎಲ್ ಅಡ್ಡಗಾಲು ಹಾಕುತ್ತಿದೆ. ಇದರಿಂದ ನಾವು ನಿಸ್ಸಾಯಕರಾಗಿದ್ದೇವೆ’ ಎಂದು ಬಿಬಿಎಂಪಿಯ ಪೂರ್ವ ವಲಯದ ಜಂಟಿ ಆಯುಕ್ತ ಡಾ.ಡಿ.ಆರ್.ಅಶೋಕ್ ಹೇಳಿದರು. ಇದೇ ಮಾತನ್ನು ಸ್ಥಳೀಯ ಜನಪ್ರತಿನಿಧಿಗಳುಕಳೆದೊಂದು ವರ್ಷದಿಂದ ಹೇಳುತ್ತಲೇ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.