ಬೆಂಗಳೂರು: ಲಾಲ್ಬಾಗ್ ಸಸ್ಯೋದ್ಯಾನದಲ್ಲಿರುವ ‘ಕೃಂಬಿಗಲ್ ಭವನ’ 162 ವರ್ಷಗಳಷ್ಟು ಹಳೆಯದಾದ ಕಟ್ಟಡ. ಉದ್ಯಾನಗಳ ಶಿಲ್ಪಿ ಎಂದೇ ಹೆಸರುವಾಸಿಯಾಗಿದ್ದ ‘ಗುಸ್ತಾವ್ ಹರ್ಮನ್ ಕೃಂಬಿಗಲ್’ ಅವರ ಹೆಸರಿನಿಂದ ಈ ಕಟ್ಟಡ ರಾಜಧಾನಿ ‘ಉದ್ಯಾನ ನಗರಿ’ಯಾಗಿ ಹೊರಹೊಮ್ಮಿದ್ದರ ಹಿಂದಿನ ಶ್ರಮವನ್ನು ಸಾರುವ ಕುರುಹೂ ಹೌದು.

ತೋಟಗಾರಿಕೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ತರಬೇತಿ ಹಾಗೂ ಉಪನ್ಯಾಸ ನೀಡುವ ಉದ್ದೇಶದಿಂದ 1860ರಲ್ಲಿ ಸುಮಾರು 25x35 ಅಡಿ ವಿಸ್ತೀರ್ಣದಲ್ಲಿ ಈ ಆಕರ್ಷಕ ಕಟ್ಟಡವನ್ನು ನಿರ್ಮಿಸಲಾಗಿತ್ತು.

ಮೂಲತಃ ಜರ್ಮನಿಯವರಾದ, ಸಸ್ಯ ವಿಜ್ಞಾನಿಯಾಗಿದ್ದಜಿ.ಎಚ್.ಕೃಂಬಿಗಲ್ ಅವರು ಲಾಲ್ಬಾಗ್ ಸಸ್ಯೋದ್ಯಾನದ ಮುಖ್ಯ ವಾಸ್ತುಶಿಲ್ಪಿಗಳಲ್ಲಿ ಒಬ್ಬರು. ಅವರು 1920ರಿಂದ 1932ರವರೆಗೆಲಾಲ್ಬಾಗ್ ಉಸ್ತುವಾರಿ ಅಧಿಕಾರಿಯಾಗಿದ್ದರು. ಉದ್ಯಾನವನ್ನು ಈ ಅವಧಿಯಲ್ಲಿ ಬಲು ಜತನದಿಂದ ಹಾಗೂ ವ್ಯವಸ್ಥಿತವಾಗಿ ಬೆಳೆಸಿದ್ದರು. ಬೆಂಗಳೂರು ಇಂದು ಜಾಗತಿಕವಾಗಿ ‘ಉದ್ಯಾನ ನಗರಿ’ ಎಂಬ ಪಟ್ಟ ಮುಡಿಗೇರಿಸಿಕೊಳ್ಳುವಲ್ಲಿ ಅವರ ಪಾತ್ರವೂ ಮಹತ್ವದ್ದು. ತೋಟಗಾರಿಕೆ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯ ಸ್ಮರಣಾರ್ಥ ಈ ಕಟ್ಟಡಕ್ಕೆ ಅವರ ಹೆಸರನ್ನೇ ಇಡಲಾಗಿತ್ತು.

ನೋಡಲು ಥೇಟ್ ಹೈಕೋರ್ಟ್ ಕಟ್ಟಡದ ಶೈಲಿಯಲ್ಲೇ ಕಾಣುವ ಈ ಕಟ್ಟಡದ ಮುಂಭಾಗದಲ್ಲಿ ನಾಲ್ಕು ಕಂಬಗಳಿದ್ದು, ಮೇಲ್ಭಾಗದಲ್ಲಿ ಮೈಸೂರು ಸಾಮ್ರಾಜ್ಯದ ಲಾಂಛನವಾದ ‘ಗಂಡಭೇರುಂಡ’ ಜನರ ಗಮನ ಸೆಳೆಯುತ್ತದೆ.

ಶತಮಾನ ಕಂಡಿರುವ ಈ ಭವನ ಇತ್ತೀಚಿನ ವರ್ಷಗಳಲ್ಲಿ ಶಿಥಿಲಾವಸ್ಥೆ ತಲುಪಿತ್ತು. ಈ ಕಟ್ಟಡವನ್ನು ತೋಟಗಾರಿಕೆ ಇಲಾಖೆ ಮರುನಿರ್ಮಿಸಿದೆ. ಆದರೆ, ಬೆಂಗಳೂರಿನ ಇತಿಹಾಸದ ಕುರುಹನ್ನು ಹೊತ್ತ ಈ ಕಟ್ಟಡದ ಶೈಲಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

‘ಈ ಕಟ್ಟಡವು ‘ಮಾಲಿಗಳ ತರಬೇತಿ ಕೇಂದ್ರ’ವಾಗಿತ್ತು. ಮಾಲಿಗಳಿಗೆ ಉದ್ಯಾನದ ನಿರ್ವಹಣೆ, ಸಸ್ಯಗಳನ್ನು ಬೆಳೆಸುವುದು, ಪೋಷಣೆ ಸೇರಿದಂತೆ ಎಲ್ಲ ರೀತಿಯ ತರಬೇತಿಯನ್ನು ಇಲ್ಲಿ ನೀಡಲಾಗುತ್ತಿತ್ತು. ಕೃಂಬಿಗಲ್ ಅವರು ಉದ್ಯಾನದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದ ಅವಧಿಯಲ್ಲಿ ಈ ಕಟ್ಟಡ ಅವರಿಗೆ ಹೆಚ್ಚುಪ್ರಿಯವಾದ ಸ್ಥಳವಾಗಿತ್ತು. ಹಾಗಾಗಿ ಕಟ್ಟಡಕ್ಕೆ ಅವರ ಹೆಸರು ನಾಮಕರಣ ಮಾಡಲಾಯಿತು’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್ ತಿಳಿಸಿದರು.

‘ಸಂರಕ್ಷಿತ ಸಸ್ಯ ಮಾದರಿಗಳ ಸಂಗ್ರಹ ಮತ್ತು ವೈಜ್ಞಾನಿಕ ಅಧ್ಯಯನ ನಡೆಸುವ ‘ಹರ್ಬೇರಿಯಂ’ಗಳೂ ಈ ಕಟ್ಟಡದಲ್ಲಿದ್ದವು. ಉದ್ಯಾನದಲ್ಲಿದ್ದ ಸಸಿಗಳು ಹಾಗೂ ಅವುಗಳ ಎಲೆಗಳು ಯಾವ ಪ್ರಭೇದಕ್ಕೆ ಸೇರುತ್ತವೆ ಎಂಬ ಮಾಹಿತಿಯ ದಾಖಲೀಕರಣ ಇಲ್ಲೇ ನಡೆಯುತ್ತಿತ್ತು’ ಎಂದರು.

‘ಶತಮಾನಗಳಷ್ಟು ಹಳೆಯ ಕಟ್ಟಡ ಇತ್ತೀಚಿನ ವರ್ಷಗಳಲ್ಲಿ ಶಿಥಿಲಾವಸ್ಥೆ ತಲುಪಿತ್ತು. ಭಾರಿ ಮಳೆಯಿಂದ ಕಟ್ಟಡ ಬಹುತೇಕ ಕುಸಿದಿತ್ತು. ಬಳಿಕ ಕಟ್ಟಡದ ಮರುಸ್ಥಾಪನೆ ಕುರಿತು ಸಿವಿಲ್ ಏಯ್ಡ್ ಟೆಕ್ನಾಲಜೀಸ್ ಸಂಸ್ಥೆಯಿಂದ ತಾಂತ್ರಿಕ ಸಲಹೆ ಕೇಳಿದೆವು. ಅವರು ಕಟ್ಟಡವನ್ನು ಯಥಾವತ್ತಾಗಿ ಮರುನಿರ್ಮಿಸುವಂತೆ ವರದಿ ನೀಡಿದರು’ ಎಂದು ವಿವರಿಸಿದರು.

‘ಇಲಾಖೆ ಮನವಿ ಮೇರೆಗೆಪುರಾತತ್ವ ಇಲಾಖೆಯ ತಾಂತ್ರಿಕ ಸಮಿತಿ ಬಂದು ಸ್ಥಳ ಪರಿಶೀಲಿಸಿತು. ಯಥಾವತ್ತಾಗಿ ಕಟ್ಟಡ ನಿರ್ಮಾಣ ಮಾಡಲು ಅಂತಿಮ ನಿರ್ಧಾರ ಕೈಗೊಂಡರು. ₹1 ಕೋಟಿ ವೆಚ್ಚದಲ್ಲಿ ಹಳೆಯ ಶೈಲಿಯಲ್ಲೇ ಕಟ್ಟಡವನ್ನು ಮರುನಿರ್ಮಿಸಲಾಯಿತು. ಒಂದೂವರೆ ವರ್ಷದಲ್ಲಿ ಹೊಸ ಭವನ ಸಿದ್ಧವಾಗಿದೆ’ ಎಂದು ಮಾಹಿತಿ ನೀಡಿದರು.

‘ವರ್ಚುವಲ್ ಮ್ಯೂಸಿಯಂ’ಗೆ ಸಿದ್ಧತೆ
‘ಕೃಂಬಿಗಲ್ ಭವನವನ್ನು ಮತ್ತಷ್ಟು ಪ್ರಸಿದ್ಧಿಗೊಳಿಸುವ ಉದ್ದೇಶದಿಂದ ಇದಕ್ಕೆ ‘ವರ್ಚುವಲ್ ಮ್ಯೂಸಿಯಂ’ ರೂಪ ನೀಡಲಿದ್ದೇವೆ. ಇಲ್ಲಿ 100 ಆಸನಗಳ ವ್ಯವಸ್ಥೆ ಇರಲಿದೆ’ಎಂದು ಜಗದೀಶ್ ಮಾಹಿತಿ ನೀಡಿದರು.

‘ಕೃಂಬಿಗಲ್ ಅವರ ಜೀವನ, ಸಾಧನೆ, ತೋಟಗಾರಿಕೆಗೆ ಅವರ ಕೊಡುಗೆ, ಉದ್ಯಾನಗಳ ವಿನ್ಯಾಸ, ಲಾಲ್ಬಾಗ್ ಉದ್ಯಾನದ ಇತಿಹಾಸ, ಇಲ್ಲಿನ ವಿಶೇಷ ಸಸ್ಯಸಂಪತ್ತು, ಫಲಪುಷ್ಪ ಪ್ರದರ್ಶನ ಸೇರಿದಂತೆ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲುವ ವಿಚಾರಗಳನ್ನು ಮ್ಯೂಸಿಂಯನ ಒಳಗೋಡೆಗಳ ಮೇಲೆ ಪ್ರದರ್ಶಿಸಲಾಗುವುದು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಇದಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳ ಪ್ರದರ್ಶನವೂ ಇರಲಿದೆ’ ಎಂದುವಿವರಿಸಿದರು.

‘ಸಾರ್ವಜನಿಕರು ಉದ್ಯಾನ ಸುತ್ತುವ ಮುನ್ನ ಇಲ್ಲಿ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿದರೆ, ಉದ್ಯಾನದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಕೃಂಬಿಗಲ್ ಅವರ ವಿಚಾರಗಳನ್ನು ಜನರಿಗೆ ತಿಳಿಸುವುದರ ಜೊತೆಗೆ ಇಲಾಖೆಗೂ ವರಮಾನ ಬರುವಂತೆ ಮಾಡುವ ಸಲುವಾಗಿ ಮ್ಯೂಸಿಯಂಗೆ ಪ್ರವೇಶ ಶುಲ್ಕ ನಿಗದಿ ಮಾಡುವ ಚಿಂತನೆಯೂ ಇದೆ. ಈ ಕುರಿತು ಸದ್ಯದಲ್ಲೇ ಸಭೆ ನಡೆಸಲಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.