ಬೆಂಗಳೂರು: ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಅವರ 56 ಪುಸ್ತಕಗಳನ್ನು ಇ–ಪುಸ್ತಕಗಳ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆ್ಯಪ್ನಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.

ಫೇಸ್ಬುಕ್ ನೇರಪ್ರಸಾರದಲ್ಲಿ ನಡೆದ ಕಾರ್ಯಕ್ರಮದಲ್ಲಿಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಚಿದಾನಂದ ಗೌಡ ಹಾಗೂ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಭಾಗವಹಿಸಿದ್ದರು.

‘ಕುವೆಂಪು ಅವರು ಪ್ರಕಾಶನದ ಹೊಸ ಸಾಧ್ಯತೆಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. ಆ್ಯಪ್ ಮೂಲಕ ಪ್ರಪಂಚದೆಲ್ಲೆಡೆ ಮೊಬೈಲ್ನಲ್ಲೇ ಅವರ ಪುಸ್ತಕಗಳನ್ನು ಓದುವ ದಿನ ನೋಡಿದ್ದರೆ ಕುವೆಂಪು ಅವರು ಬಹಳ ಸಂತೋಷ ಪಡುತ್ತಿದ್ದರು’ ಎಂದುತಾರಿಣಿ ಹೇಳಿದರು.

ಪ್ರೊ.ಕೆ.ಚಿದಾನಂದ ಗೌಡ,‘ತಂತ್ರಜ್ಞಾನದ ಸಾಧ್ಯತೆಗಳಿಗೆ ತಕ್ಕಂತೆ ನಾವು ಬದಲಾಗಬೇಕು. ಅದೊಂದೇ ಭಾಷೆಯನ್ನು ಬೆಳೆಸುವ ದಾರಿ. ಕುವೆಂಪು ಅವರ ಪುಸ್ತಕಗಳನ್ನು ಹೊಸಕಾಲದ ಸಾಧ್ಯತೆಗಳೊಂದಿಗೆ ಹೊಸ ಓದುಗರಿಗೆ ತರಲು ಸಾಧ್ಯವಾಗಿರುವುದು ಸಂತಸ ತಂದಿದೆ’ ಎಂದರು.

ನರಹಳ್ಳಿ ಬಾಲಸುಬ್ರಹ್ಮಣ್ಯ,‘ಇಂದಿನ ಕಾಲಮಾನದ ತಲ್ಲಣಗಳಿಗೆ ಕುವೆಂಪು ಸಾಹಿತ್ಯದಲ್ಲಿ ಉತ್ತರ ಇದೆ. ರಾಜಕೀಯಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ಕೆಲಸಗಳ ಮೂಲಕಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದು ತಿಳಿಸಿದರು.

ಕುವೆಂಪು ಅವರ ಪುಸ್ತಕಗಳನ್ನುwww.mylang.in ಮೂಲಕ ಓದುಗರು ಮೊಬೈಲ್ನಲ್ಲಿ ಓದಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.