ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸುವ ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್’ ಅವರ ಜೀವನ ವಿಷಯಾಧಾರಿತ ಹೂವಿನ ಪ್ರತಿಕೃತಿ ಕಣ್ಮನ ಸೆಳೆಯಲಿದೆ.

ಸ್ವಾತಂತ್ರೋತ್ಸವದ ಅಂಗವಾಗಿ 2024ರ ಅಗಸ್ಟ್ 8ರಿಂದ ಅಗಸ್ಟ್ 19ರವರೆಗೆ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ಈಗಾಗಲೇ ತೋಟಗಾರಿಕೆ ಇಲಾಖೆ ವಿವಿಧ ಬಗೆಯ ಅಲಂಕಾರಿಕ, ದೇಶಿ–ವಿದೇಶಿ ಹೂಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಗಾಜಿನ ಮನೆಯಲ್ಲಿ ಅಂಬೇಡ್ಕರ್ ಅವರ ಪುತ್ಥಳಿ, ಕಲಾಕೃತಿಗಳು ಸೇರಿ ಅವರ ಜೀವನದ ಪ್ರಮುಖ ಘಟನೆಗಳ ಛಾಯಾಚಿತ್ರಗಳು, ಸಂಕ್ಷಿಪ್ತ ಮಾಹಿತಿ ಒದಗಿಸುವ ಬ್ಯಾನರ್ಗಳನ್ನು ಅಳವಡಿಸಲಾಗುವುದು. ಗಾಜಿನ ಮನೆಯಲ್ಲಿ ಒಂದು ಭಾಗದಲ್ಲಿ ಸಂಸತ್ ಭವನ, ಅಂಬೇಡ್ಕರ್ ಅವರು ಜನಿಸಿದ ಸ್ಥಳ ಹಾಗೂ ಸಂವಿಧಾನದ ಪ್ರತಿಕೃತಿಗಳನ್ನು ಪುಷ್ಪಗಳಲ್ಲಿ ಅಲಂಕರಿಸುವ ಕುರಿತು ತಜ್ಞರೊಂದಿಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಎರಡು ಮೂರು ಸಭೆಗಳು ನಡೆದಿವೆ.

‘ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳನ್ನು ಹೂ ರಾಶಿಯ ಮೂಲಕ ಯುವ ಸಮೂಹ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶವಿದೆ. ಲಾಲ್ಬಾಗ್ನ ಎಲ್ಲ ದ್ವಾರಗಳಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿಸುವ ಎಲ್ಇಡಿ ಪರದೆಗಳನ್ನು ಅಳವಡಿಸಲಾಗುವುದು. ಗಾಜಿನ ಮನೆಯ ಒಳಾಂಗಣದಲ್ಲಿ ಐತಿಹಾಸಿಕ ಘಟನೆಗಳನ್ನು ಸಾರುವ ಫ್ಲೆಕ್ಸ್ಗಳು, ಪ್ರತಿಕೃತಿಗಳನ್ನು ಅಳವಡಿಸುವ ಕುರಿತು ಚಿಂತನೆ ನಡೆಯುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಗಾಜಿನ ಮನೆಯಲ್ಲಿ ವೈವಿಧ್ಯಮಯ ಪುಷ್ಪಗಳ ಪ್ರದರ್ಶನ: ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ವರ್ಷಕ್ಕೊಮ್ಮೆ ಅರಳುವ ವಿವಿಧ ಹೂವುಗಳು ಪುಷ್ಪ ರಸಿಕರಿಗೆ, ಕವಿ ಮನಸ್ಸುಗಳಿಗೆ ಮುದ ನೀಡಲಿವೆ. ಸೇವಂತಿಗೆ, ಗುಲಾಬಿ, ಪಾಯಿನ್ಸಿಟಿಯಾ, ಪೆಂಟಾಸ್ ಕಾರ್ನಿಯಾ, ಜರ್ಬೇರಾ, ಕಾರ್ನೇಷನ್ಸ್, ಟ್ಯೂಬಿ ರೋಸ್ ರೋಟೆಡ್, ಬಿಗೋನಿಯಾ, ಸಿಲೋಷಿಯಾ, ಜಿರೇನಿಯಂ ಇತ್ಯಾದಿ ಹೂವುಗಳು ನೋಡುಗರನ್ನು ಸೆಳೆಯಲಿವೆ’ ಎಂದರು.

ಅಂಬೇಡ್ಕರ್ ಅವರ ಜೀವನವನ್ನು ಫಲಪುಷ್ಪ ಪ್ರದರ್ಶನದಲ್ಲಿ ಹೇಗೆ ಪ್ರಸ್ತುತ ಪಡಿಸಬಹುದು ಎಂಬುದರ ಕುರಿತು ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರಗಳ ಸಲಹೆ ಪಡೆದುಕೊಳ್ಳಲಾಗುವುದು.
ಎಂ. ಜಗದೀಶ್ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

50 ಸಾವಿರ ಹೂ ಕುಂಡಗಳ ಸಿದ್ಧ

‘ಫಲಪುಷ್ಪ ಪ್ರದರ್ಶನಕ್ಕಾಗಿ ಲಾಲ್ಬಾಗ್ ಕಬ್ಬನ್ ಉದ್ಯಾನ ಕೆಮ್ಮಣ್ಣುಗುಂಡಿ ಊಟಿಯ ಉದ್ಯಾನಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ಬೆಳಸಲಾಗುತ್ತಿದ್ದು ಜುಲೈ ಕೊನೆಯ ವಾರದಲ್ಲಿ ಲಾಲ್ಬಾಗ್ ಉದ್ಯಾನಕ್ಕೆ ಬರಲಿವೆ. ಇದರ ಜೊತೆಗೆ ಹೊರ ರಾಜ್ಯ ಮತ್ತು ವಿದೇಶಗಳಿಂದಲೂ ವಿವಿಧ ಬಗೆಯ ಹೂಗಳನ್ನು ತರಿಸುವ ಕುರಿತು ಚರ್ಚಿಸಲಾಗುತ್ತಿದೆ’ ಎಂದು ಲಾಲ್ಬಾಗ್ ಉಪ ನಿರ್ದೇಶಕಿ ಕುಸುಮಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.