ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಬೆಟ್ಟಹಲಸೂರು ಗ್ರಾಮದಲ್ಲಿ 172 ಎಕರೆ ವಿಸ್ತೀರ್ಣದಲ್ಲಿ ಕಬ್ಬನ್ ಉದ್ಯಾನ ಮತ್ತು ಲಾಲ್‌ಬಾಗ್ ಮಾದರಿ ಉದ್ಯಾನ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಬೆಟ್ಟಹಲಸೂರು ಗ್ರಾಮದಲ್ಲಿ ಒಂದೇ ಕಡೆ 173 ಎಕರೆ 34 ಗುಂಟೆ
ಸರ್ಕಾರಿ ಜಮೀನು ಇದೆ. ಅದರ ಮೇಲೆ ಭೂಗಳ್ಳರು ಕಣ್ಣು ಹಾಕಿದ್ದರು. ಆ ಸ್ವತ್ತನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಅಲ್ಲಿ ವಿಸ್ತಾರವಾದ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ. ಕಂದಾಯ ಇಲಾಖೆ ಸ್ವಾಧೀನದಲ್ಲಿರುವ ಜಮೀನನ್ನು ತೋಟಗಾರಿಕಾ ಇಲಾಖೆಗೆ ಹಸ್ತಾಂತರಿಸಲಾಗುವುದು. ಮುಂದಿನ ವಾರವೇ ಉದ್ಯಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು’ ಎಂದರು.

ನೂತನ ಉದ್ಯಾನಕ್ಕೆ ಕೆಂಪೇಗೌಡರ ಹೆಸರನ್ನು ಇಡಲಾಗುವುದು. ನೈಸರ್ಗಿಕ ಬಂಡೆಗಳು ಆ ಪ್ರದೇಶದಲ್ಲಿದ್ದು, ಅವುಗಳನ್ನು ಬಳಸಿಕೊಂಡು ‘ರಾಕ್ ಗಾರ್ಡನ್’ ನಿರ್ಮಿಸಲಾಗುವುದು. ಸಾಂಸ್ಕೃತಿಕ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ಉದ್ಯಾನದಲ್ಲಿ ಥೀಮ್ ಪಾರ್ಕ್, ನಾಡಪ್ರಭು ಕೆಂಪೇಗೌಡರ ವಸ್ತು ಸಂಗ್ರಹಾಲಯ, ಕೆಂಪೇಗೌಡರ ಆಳ್ವಿಕೆಯ ಇತಿಹಾಸ ಸಾರುವ ಧ್ವನಿ ಮತ್ತು ಬೆಳಕನಿನ ವ್ಯವಸ್ಥೆ, ಶ್ರೀಗಂಧದ ವನ, ಔಷಧೀಯ ಸಸ್ಯಗಳ ವನ, ಬಂಡೆಗಳ ನಡುವೆ ನೀರಿನ ಕಾರಂಜಿ, ಪಕ್ಕದ ಕೆರೆಯಲ್ಲಿ ದೋಣಿವಿಹಾರ, ಬಯಲು ರಂಗಮಂದಿರ, ಜಿಮ್ ಹಾಗೂ ಯೋಗ ಕೇಂದ್ರಗಳು ಇರುತ್ತವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.