ಬೆಂಗಳೂರು: ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (ಆರ್‌ಯುಎಎಸ್) ಪ್ರಸಕ್ತ ವರ್ಷದ ಎಂಬಿಎ, ಎಂ.ಟೆಕ್, ಡಿ.ಫಾರ್ಮ ಮತ್ತು ಎಂ.ಫಾರ್ಮಾ ತರಗತಿಗಳು ಸೋಮವಾರದಿಂದ ಆರಂಭವಾದವು. ಆನ್‌ಲೈನ್ ತರಗತಿಗಳನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ. ಗೋವಿಂದ ಆರ್. ಕಡಂಬಿ ಉದ್ಘಾಟಿಸಿದರು. ‘2020 ನಮ್ಮೆಲ್ಲರಿಗೂ ಅನೇಕ ಸವಾಲನ್ನು ತಂದೊಡ್ಡಿದೆ. ಈ ಸವಾಲುಗಳನ್ನು ಅವಕಾಶಗಳನ್ನಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು’ ಎಂದು ಎಂದು ಅವರು ಹೇಳಿದರು.

‘ಮುಂದಿನ ದಶಕ ಜ್ಞಾನದ ಯುಗ ಎನಿಸಿಕೊಳ್ಳಲಿದೆ ಮತ್ತು ಅದು ಭಾರತದ್ದೇ ಆಗಿರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ವಿ.ವಿ. ಭಟ್ ಅವರು ಹೊಸ ಅನ್ವೇಷಣೆ ಮತ್ತು ಸಂಶೋಧನಾ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಜಿಇಎಫ್‌ನ ಮುಖ್ಯ ಕಾರ್ಯನಿರ್ವಾಹಕ ಎಂ.ಆರ್. ಶ್ರೀನಿವಾಸಮೂರ್ತಿ, ‘ಆರ್‌ಯುಎಎಸ್ ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷಾ ದೃಷ್ಟಿಯಿಂದ ಸಜ್ಜುಗೊಳಿಸುವುದಿಲ್ಲ. ಅವರನ್ನು ನಿಜವಾದ ವೃತ್ತಿಪರರನ್ನಾಗಿಸುತ್ತದೆ. ವಿಶ್ವವಿದ್ಯಾಲಯದ ವಾತಾವರಣವು ಇದಕ್ಕೆ ಪೂರಕವಾಗಿದೆ’ ಎಂದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್. ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಡಿ.ಸಿ. ಸುಂದರೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.