ಬೆಂಗಳೂರು: ಕಲಾ ಕುಟೀರಗಳಲ್ಲಿ ಉದ್ಯಾನ ನಿರ್ವಹಣಾ ಸಲಕರಣೆಗಳ ದಾಸ್ತಾನು, ಗಿಡಗಂಟಿಗಳಿಂದ ಆವರಿಸಿಕೊಂಡು ಅನಾಥವಾದ ಕಲಾಕೃತಿಗಳು, ನೀರು ಹಾಗೂ ನಿರ್ವಹಣೆ ಇಲ್ಲದ ಶೌಚಾಲಯ, ಎಲ್ಲೆಂದರೆಲ್ಲಿ ಕಸದ ರಾಶಿ...

–ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಣೆ ಮಾಡುತ್ತಿರುವ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸ್ಥಿತಿ.

13 ಎಕರೆಯಲ್ಲಿರುವ ಈ ಪ್ರದೇಶವು ಮೂಲಸೌಕರ್ಯಕ್ಕಾಗಿ ಕಾದು ಕುಳಿತಿದೆ. ಯಾವುದೇ ಸರ್ಕಾರ ಈ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡದಿದ್ದರಿಂದ ನಿರ್ಮಾಣಗೊಂಡ ಕಟ್ಟಡಗಳು ಶಿಥಿಲಗೊಂಡರೆ, ನಿರ್ಮಾಣ ಹಂತದ ಕಟ್ಟಡಗಳು ಅನುದಾನದ ಕೊರತೆಯಿಂದ ಪಾಳು ಕೊಂಪೆಯಾಗಿವೆ. ಇದರಿಂದಾಗಿ ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರತಿವರ್ಷ ಬೆರಳಣಿಕೆಯಷ್ಟು ಕಾರ್ಯಕ್ರಮಗಳಷ್ಟೇ ನಡೆಯುತ್ತಿವೆ. ಕಲಾವಿದರಿಗೆ ಉಳಿದುಕೊಳ್ಳಲು ಸೂಕ್ತ ವಸತಿ ಸೌಲಭ್ಯವಿರದ ಪರಿಣಾಮ ಕಲಾ ಶಿಬಿರ, ತರಬೇತಿ ಹಾಗೂ ಪ್ರದರ್ಶನಗಳಿಗೆ ಕೂಡ ಸಮಸ್ಯೆಯಾಗಿದೆ.

ಕಲಾಗ್ರಾಮದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ವಿಭಾಗ, ಶಿಲ್ಪಕಲಾ ಅಕಾಡೆಮಿಯ ಗ್ಯಾಲರಿ, ಬಯಲು ರಂಗಮಂದಿರಗಳು, ಆಡಳಿತ ಕಟ್ಟಡ ಹಾಗೂ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಕಟ್ಟಡ ಇದೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಗ್ರಾಫಿಕ್ ಸ್ಟುಡಿಯೊದ ಕಟ್ಟಡ ಅನುದಾನದ ಕೊರತೆಯಿಂದ ಪಾಳು ಬಿದ್ದಿದೆ. ಸಾಹಿತಿಗಳು, ಕಲಾವಿದರು ಹಾಗೂ ಶಿಲ್ಪಿಗಳಿಗೆ ಚಟುವಟಿಕೆಗಳನ್ನು ನಡೆಸಲು ನಿರ್ಮಿಸಲಾಗಿದ್ದ ಕಲಾ ಕುಟೀರಗಳಿಗೆ ಬೀಗ ಬಿದ್ದಿದ್ದು, ನಿರ್ವಹಣೆ ಇಲ್ಲದೆಯೇ ಕಿಟಕಿಗಳು ಹಾಳಾಗಿವೆ. ಕೆಲ ಕಿಟಕಿಗಳ ಬಾಗಿಲುಗಳು ಕಿತ್ತು ಹೋಗಿವೆ. ಇದರಿಂದಾಗಿ ಕಲಾ ಕುಟೀರಗಳು ಕಲಾವಿದರಿಗೆ ನಿರುಪಯುಕ್ತವಾಗಿ, ಕತ್ತಿ, ಗುದ್ದಲಿಯಂತಹ ವಿವಿಧ ಸಾಮಗ್ರಿಗಳ ದಾಸ್ತಾನು ಕೇಂದ್ರಗಳಾಗಿವೆ.

ಮರೆಯಾದ ಕಲಾಕೃತಿ: ಶಿಲ್ಪ ಕಲಾ ಶಿಬಿರ ಸೇರಿ ವಿವಿಧ ಸಂದರ್ಭಗಳಲ್ಲಿ ಶಿಲ್ಪಿಗಳು ಸಿದ್ಧಪಡಿಸಿದ ಕಲಾಕೃತಿಗಳು ಎಲ್ಲೆಂದರೆಲ್ಲಿ ಬಿದ್ದಿವೆ. ಕೆಲವು ಕಲಾಕೃತಿಗಳು ಕಸದ ರಾಶಿಯಿಂದ, ಇನ್ನೂ ಕೆಲವು ಕಲಾಕೃತಿಗಳು ಗಿಡಗಂಟಿಗಳಿಂದ ಮರೆಯಾಗಿವೆ. ಕಲಾಕೃತಿಗಳನ್ನು ಇಡಲು ಸೂಕ್ತ ವ್ಯವಸ್ಥೆ ಮಾಡದಿದ್ದರಿಂದ ಭಗ್ನಾವಶೇಷದಂತೆ ಸಾಂಸ್ಕೃತಿಕ ಸಮುಚ್ಚಯದ ಸುತ್ತಮುತ್ತ ಕಾಣಸಿಗುತ್ತವೆ.

‘ಮೂಲಸೌಕರ್ಯ ಕೊರತೆಯಿಂದ ಕಲಾಗ್ರಾಮದಲ್ಲಿ ಕಲಾ ಶಿಬಿರ ಹಾಗೂ ಪ್ರದರ್ಶನಗಳು ನಡೆಸಲು ಸಾಧ್ಯವಾಗುತ್ತಿಲ್ಲ. ಈ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದಲ್ಲಿ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಭಿವೃದ್ಧಿಗೆ ಸರ್ಕಾರ ಅಗತ್ಯ ಅನುದಾನ ನೀಡಿ, ಕಲಾ ಚಟುವಟಿಕೆಗಳಿಗೆ ಅವಕಾಶ ನೀಡಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಲಾವಿದರೊಬ್ಬರು ಆಗ್ರಹಿಸಿದರು.

ಕಲಾಗ್ರಾಮದ ಸ್ಥಿತಿಗತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಯಿಂದ ವರದಿ ಪಡೆದು ಸುಧಾರಣೆಗೆ ಕ್ರಮ ವಹಿಸಲಾಗುವುದು
ಧರಣೀದೇವಿ ಮಾಲಗತ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ

ರಂಗಮಂದಿರದಲ್ಲಿ ನಡೆಯದ ಪ್ರದರ್ಶನ

ಕಲಾಗ್ರಾಮದಲ್ಲಿನ ಬಯಲು ರಂಗಮಂದಿರದಲ್ಲಿ ಕೆಲ ವರ್ಷಗಳಿಂದ ಯಾವುದೇ ಪ್ರದರ್ಶನ ನಡೆದಿಲ್ಲ. ಇಲಾಖೆಯೂ ಈ ರಂಗಮಂದಿರವನ್ನು ನಿರ್ವಹಣೆ ಮಾಡಿಲ್ಲ. ರಂಗಮಂದಿರದ ನಿರ್ವಹಣಾ ಕೊಠಡಿಯ ಗೋಡೆಗಳು ಶಿಥಿಲಗೊಂಡಿವೆ. ಪ್ರೇಕ್ಷಕರಿಗಾಗಿ ನಿರ್ಮಿಸಲಾಗಿದ್ದ ನೆಲಹಾಸಿನ ನಡುವೆ ಹುಲ್ಲಿನ ಗಿಡಗಳು ಬೆಳೆದಿವೆ. ಪ್ರದರ್ಶನ ನೀಡುವ ವೇದಿಕೆಯ ಗೋಡೆಗಳನ್ನು ಮರೆದ ಕೊಂಬೆಗಳು ಆವರಿಸಿಕೊಂಡಿವೆ. 2020ರಲ್ಲಿ ಎನ್ಎಸ್ಡಿ ವಿದ್ಯಾರ್ಥಿಗಳು ಇಲ್ಲಿ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಪ್ರದರ್ಶಿಸಿದ್ದರು. ಆ ವೇಳೆ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಳಿಕ ಯಾವುದೇ ಪ್ರದರ್ಶನ ಈ ವೇದಿಕೆಯಲ್ಲಿ ನಡೆದಿಲ್ಲ.

ನೀರು ಶೌಚಾಲಯ ಸಮಸ್ಯೆ

ಇಲ್ಲಿನ ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡು ಪಾಳು ಬಿದ್ದಿವೆ. ನೀರು ಬರದಿದ್ದರಿಂದ ಬಳಕೆಗೆ ಯೋಗ್ಯವಾಗಿಲ್ಲ. ಇದರಿಂದಾಗಿ ನಾಯಿಗಳ ವಾಸಸ್ಥಾನವಾಗಿದೆ. ರಾಷ್ಟ್ರೀಯ ನಾಟಕ ಶಾಲೆ ವಿದ್ಯಾರ್ಥಿಗಳು ಹಿಂದೆ ವಾಸವಿದ್ದ ವಸತಿ ಗೃಹಗಳಿಗೆ ಹಲವು ದಿನಗಳಿಂದ ಬೀಗ ಹಾಕಲಾಗಿದೆ. ಅವುಗಳ ಸುತ್ತ ಗಿಡಗಂಟಿಗಳು ಬೆಳೆದಿವೆ. ಸಾಂಸ್ಕೃತಿಕ ಸಮುಚ್ಛಯದಲ್ಲಿರುವ ಕುಡಿಯ ನೀರಿನ ಶುದ್ಧೀಕರಣ ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಕಾರ್ಯಕ್ರಮ ಆಯೋಜಕರು ಹೊರಗಡೆಯಿಂದ ನೀರಿನ ಕ್ಯಾನ್ಗಳನ್ನು ತರಿಸಿಕೊಳ್ಳಬೇಕಾಗಿದೆ. ಈ ಕಟ್ಟಡದ ಲಿಫ್ಟ್ಗಳೂ ಕಾರ್ಯನಿರ್ವಹಿಸುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.