ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ಕೀಮೋಥೆರಪಿಗೆ ವಿಶೇಷ 'ಡೇ-ಕೇರ್ ಸೆಂಟರ್' ನಿರ್ಮಿಸಿದ್ದು, ಇದಕ್ಕೆ ನಗರದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಈ ಸೆಂಟರ್ ಏಕಕಾಲದಲ್ಲಿ 50-55 ಕೀಮೋಥೆರಪಿಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕೇಂದ್ರದಲ್ಲಿ ‘ಸೈಟೊಟಾಕ್ಸಿಕ್ ಡ್ರಗ್ ಮಿಕ್ಸಿಂಗ್ ರೂಮ್’ ಸಹ ಇದೆ.

ಕಾರ್ಯಕ್ರಮದಲ್ಲಿ ಕೇಂದ್ರದ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಗಂಥಿ ವಿಭಾಗದ ಸಲಹೆಗಾರ್ತಿ ಡಾ. ಪೂನಮ್ ಪಾಟೀಲ್, ‘ಚಿಕಿತ್ಸಾ ಅವಧಿಯಲ್ಲಿ ರೋಗಿಗಳಿಗೆ ಉತ್ತಮ ಅನುಭವವನ್ನು ಒದಗಿಸುವ ಮತ್ತು ಅವರ ಆಸ್ಪತ್ರೆ ಅವಧಿಯನ್ನು ಕಡಿತ ಮಾಡುವ ಉದ್ದೇಶದಿಂದ ಡೇ–ಕೇರ್ ಸೆಂಟರ್ ವಿನ್ಯಾಸ ಮಾಡಲಾಗಿದೆ. ಈ ಸೆಂಟರ್ ಕೀಮೋಥೆರಪಿ ಸೇರಿ ಎಲ್ಲಾ ರೀತಿಯ ಕ್ಯಾನ್ಸರ್ ಆರೈಕೆ ಒದಗಿಸುತ್ತದೆ’ ಎಂದು ಹೇಳಿದರು.

ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ.ಅಮಿತ್ ರೌಥನ್ ಹಾಗೂ ಆಸ್ಪತ್ರೆಯ ವೈದ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.