ಬೆಂಗಳೂರು: ಮಂತ್ರಿ ಮಾಲ್ ಬಿಬಿಎಂಪಿಗೆ ₹ 30 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಾಕಿ ತೆರಿಗೆ ಪಾವತಿಸುವಂತೆ ಬಿಬಿಎಂಪಿಯ ಪಶ್ಚಿಮ ವಲಯದ ಕಂದಾಯ ವಿಭಾಗದ ಉಪಾಯುಕ್ತರು ಸಂಸ್ಥೆಯ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

‘ಮಂತ್ರಿ ಮಾಲ್ ಮೂರು ವರ್ಷಗಳಿಂದ ₹ 30 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈ ಮಾಲ್‌ನಲ್ಲಿರುವ ಮಳಿಗೆಗಳ ಮಾಲೀಕರಿಗೆ ಕಳೆದ ವಾರನೋಟಿಸ್ ನೀಡಿದ್ದೆವು. ಬುಧವಾರ ಮಳಿಗೆಗಳಿಗೆ ತೆರಳಿ ತೆರಿಗೆ ಪಾವತಿಸುವಂತೆ ಮತ್ತೊಮ್ಮೆ ಸೂಚನೆ ನೀಡಿದ್ದೇವೆ. ಇನ್ನು ವಾರದೊಳಗೆ ಬಾಕಿ ತೆರಿಗೆ ಪಾವತಿಸದೇ ಹೋದರೆ ಮಾಲ್‌ನಲ್ಲಿರುವ ಎಲ್ಲ ಮಳಿಗೆಗಳಿಗೆ ಬೀಗಮುದ್ರೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದೇವೆ’ ಎಂದು ಪಶ್ಚಿಮ ವಲಯದ ಉಪಾಯುಕ್ತ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ₹ 10 ಕೋಟಿ ಮೊತ್ತದ ಚೆಕ್‌ಗಳನ್ನು ಎರಡು ಬಾರಿ ಸಲ್ಲಿಸಿದ್ದರು. ಆದರೆ, ಅವರ ಖಾತೆಯಲ್ಲಿ ಹಣವಿಲ್ಲದ ಕಾರಣ ಆ ಎರಡೂ ಚೆಕ್‌ಗಳೂ ಬೌನ್ಸ್ ಆಗಿದ್ದವು’ ಎಂದೂ ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.