ಬೆಂಗಳೂರು: ‘ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿಮಾಲ್ ಸಿಬ್ಬಂದಿ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ 15 ವರ್ಷದ ಬಾಲಕ ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದಾನೆ.

ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಾಲ್‌ನಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

‘ಡಿ. 21ರಂದು ಸಂಜೆ 6ರ ಸುಮಾರಿಗೆ ಗೇಮ್ ಆಡಲೆಂದು ಮಂತ್ರಿಮಾಲ್‌ಗೆ ಹೋಗಿದ್ದೆ. ಮೊಬೈಲ್ ಚಾರ್ಜ್ ಖಾಲಿ ಆಗಿತ್ತು. ಎರಡನೇ ಮಹಡಿಯಲ್ಲಿರುವ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಮೊಬೈಲ್ ಚಾರ್ಜ್‌ಗೆ ಹಾಕಿದ್ದೆ. ಆ ಜಾಗದಲ್ಲೇ ಹಲವರು ಮೊಬೈಲ್ ಚಾರ್ಜ್‌ಗೆ ಇಟ್ಟಿದ್ದರು’ ಎಂದು ಬಾಲಕ ದೂರಿನಲ್ಲಿ ಹೇಳಿದ್ದಾನೆ.

‘ನನ್ನ ಬಳಿ ಬಂದಿದ್ದ ಮಾಲ್‌ನ ನಾಲ್ವರು ಸಿಬ್ಬಂದಿ ಜಗಳ ತೆಗೆದಿದ್ದರು. ‘ಮೊಬೈಲ್ ಕಳ್ಳತನ ಮಾಡಲು ಬಂದಿದ್ದೀಯಾ’ ಎಂದು ಹೇಳಿ, ತಳಮಹಡಿಯ ಪಾರ್ಕಿಂಗ್ ಜಾಗಕ್ಕೆ ಎಳೆದೊಯ್ದು ದೊಣ್ಣೆ ಹಾಗೂ ಎಲೆಕ್ಟ್ರಿಕ್ ತಂತಿಯಿಂದ ಹಲ್ಲೆ ಮಾಡಿದರು’ ಎಂದು ಬಾಲಕ ಹೇಳಿಕೊಂಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.