ಬೆಂಗಳೂರು: ಲೌರಿ ಜಂಕ್ಷನ್ನಿಂದ ಸಿಲ್ಕ್ಬೋರ್ಡ್ ಜಂಕ್ಷನ್ವರೆಗೆ ನಿರ್ಮಿಸುತ್ತಿರುವ ಬಸ್ ಆದ್ಯತಾ ಪಥವನ್ನು ಹಾಗೂವಿಠಲ ಮಲ್ಯ ರಸ್ತೆಯಲ್ಲಿ ಜಾರಿಗೆ ತರುತ್ತಿರುವ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಮೇಯರ್ ಎಂ.ಗೌತಮ್ ಕುಮಾರ್ ಶನಿವಾರ ಪರಿಶೀಲಿಸಿದರು.

ನಗರದಲ್ಲಿ ಹೆಚ್ಚು ವಾಹನದಟ್ಟಣೆ ಇರುವ 12 ರಸ್ತೆಗಳಲ್ಲಿ ಸಾರ್ವಜನಿಕ ಬಸ್ ಸಂಚಾರಕ್ಕಾಗಿ ‘ಬಸ್ ಪ್ರತ್ಯೇಕ ಪಥ’ ನಿರ್ಮಿಸಲಾಗುತ್ತಿದೆ. ಲೌರಿ ಜಂಕ್ಷನ್ನಿಂದ ಸಿಲ್ಕ್ಬೋರ್ಡ್ವರೆಗಿನ 17 ಕಿ.ಮೀ ರಸ್ತೆಯಲ್ಲಿ ₹15 ಕೋಟಿ ವೆಚ್ಚದಲ್ಲಿ ಬಸ್ ಸಂಚಾರಕ್ಕಾಗಿ ಪ್ರತ್ಯೇಕ ಪಥವನ್ನು ನಿರ್ಮಿಸಲಾಗುತ್ತಿದೆ. ರಸ್ತೆಯ ಎರಡೂ ಕಡೆ 3.5 ಮೀಟರ್ ಜಾಗದಲ್ಲಿ ಬೊಲಾರ್ಡ್ಸ್ ಹಾಗೂ ಕ್ರ್ಯಾಷ್ ಬ್ಯಾರಿಯರ್ಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮೇಯರ್ ಸೂಚನೆ ನೀಡಿದರು.

‘ವಾಹನ ದಟ್ಟಣೆ ತಪ್ಪಿಸಲು ಪಾಲಿಕೆಯು ನಗರದ ಕೇಂದ್ರ ಭಾಗದ ಆಯ್ದ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ ತರುತ್ತಿದೆ. 7 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಶೀಘ್ರವೇ ಜಾರಿಯಾಗಲಿದೆ. ಈ ವ್ಯವಸ್ಥೆಯಿಂದ ಪಾಲಿಕೆಗೆ ವರ್ಷಕ್ಕೆ ₹ 31.60 ಕೋಟಿ ವರಮಾನ ಬರಲಿದೆ’ ಎಂದು ಮೇಯರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.