ಲಖನೌ: ಪದಾರ್ಪಣೆ ಪಂದ್ಯವಾಡಿದ ಕೆ.ಎಲ್.ಶ್ರೀಜಿತ್ ಮತ್ತು ಯಶೋವರ್ಧನ್ ಪರಂತಾಪ್ ರಣಜಿ ಟ್ರೊಫಿ ಕ್ರಿಕೆಟ್ ‘ಸಿ’ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಕರ್ನಾಟಕ ತಂಡಕ್ಕೆ ಗುರುವಾರ ಮೇಲುಗೈ ದೊರಕಿಸಿಕೊಟ್ಟರು. ಆ ಮೂಲಕ ದೊಡ್ಡ ಮಟ್ಟದ ವೇದಿಕೆಯಲ್ಲಿ ತಮ್ಮ ಆಗಮನವನ್ನು ಸ್ಮರಣೀಯವಾಗಿಸಿದರು.

ಹೋದ ವರ್ಷದ ಡಿಸೆಂಬರ್ನಲ್ಲಿ 28 ವರ್ಷ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್.ಶ್ರೀಜಿತ್ ಅವರು ಕಳೆದ ವರ್ಷದ ಡಿಸೆಂಬರ್ನಲ್ಲಿ ಮೊದಲ ಬಾರಿ ಲಿಸ್ಟ್ ಎ ಕ್ರಿಕೆಟ್ನಲ್ಲಿ ಶತಕ ದಾಖಲಿಸಿದ್ದರು. ಆದರೆ ಸೀನಿಯರ್ ತಂಡದಲ್ಲಿ ಆಡಲು ಸುಮಾರು ಒಂದು ವರ್ಷ ಕಾದಿದ್ದು ವ್ಯರ್ಥವಾಗಲಿಲ್ಲ. ಏಕನಾ ಕ್ರೀಡಾಂಗಣದಲ್ಲಿ ಅವರು 153 ಎಸೆತಗಳಲ್ಲಿ 110 ರನ್ ಬಾರಿಸಿದರು.

ಆಲ್ರೌಂಡರ್ ಯಶೋವರ್ಧನ್ ಅವರು ಕೆಚ್ಚೆದೆಯ ಆಟವಾಡಿ 125 ಎಸೆತಗಳಲ್ಲಿ 55 ರನ್ ಬಾರಿಸಿ ಕರ್ನಾಟಕ ಲೀಡ್ ಉಬ್ಬುವಂತೆ ಮಾಡಿದರು. ಉತ್ತರ ಪ್ರದೇಶದ 89 ರನ್ಗಳಿಗೆ ಉತ್ತರವಾಗಿ ಬುಧವಾರ 5 ವಿಕೆಟ್ಗೆ 127 ರನ್ ಗಳಿಸಿದ್ದ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 275 ರನ್ ಗಳಿಸಿತು.

ಆದರೆ ಎರಡನೇ ಇನಿಂಗ್ಸ್ನಲ್ಲಿ ಸುಧಾರಿತ ಆಟವಾಡಿದ ಆತಿಥೇಯ ತಂಡ ದಿನದಾಟ ಮುಗಿದಾಗ 1 ವಿಕೆಟ್ಗೆ 78 ರನ್ ಗಳಿಸಿತು. ಇನಿಂಗ್ಸ್ ಬಾಕಿ ತೀರಿಸಲು ಇನ್ನೂ 108 ರನ್ ಗಳಿಸಬೇಕಾಗಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು, ಕರ್ನಾಟಕಕ್ಕೆ ಮಹತ್ವದ ಗೆಲುವಿಗೆ ಯತ್ನಿಸಲಿದೆ. ಎಂಟರ ಘಟ್ಟದ ಅವಕಾಶ ಜೀವಂತಗೊಳಿಸಲು ಮಯಂಕ್ ಬಳಗಕ್ಕೆ ಗೆಲುವು ಅನಿವಾರ್ಯವಾಗಲಿದೆ.

ಮೊದಲ ದಿನವೇ ಮುನ್ನಡೆ ಪಡೆದಿದ್ದ ಕರ್ನಾಟಕ ಅದನ್ನು ಸಾಧ್ಯವಾದಷ್ಟು ಹೆಚ್ಚಿಸುವ ಗುರಿ ಹೊಂದಿತ್ತು. ಶ್ರೇಯಸ್ ಗೋಪಾಲ್ ದಿನದ ಆರನೇ ಓವರಿನಲ್ಲಿ ನಿರ್ಗಮಿಸಿದರು. ಹೀಗಾಗಿ ಕೃಷ್ಣನ್ ಶ್ರೀಜಿತ್ ಮತ್ತು ಬೌಲರ್ಗಳಷ್ಟೇ ಆಡಲು ಉಳಿದಿದ್ದರು. ಉತ್ತರ ಪ್ರದೇಶ ತಿರುಗೇಟು ನೀಡುವಂತೆ ಕಂಡಿತು.

ಆದರೆ ಶ್ರೀಜಿತ್ ಜೊತೆಗೂಡಿದ ಪರಂತಾಪ್ ಆ ಎಲ್ಲ ಲೆಕ್ಕಾಚಾರಗಳನ್ನು ಹುಸಿಗೊಳಿಸಿದರು. ಅನುಭವಿ ಬ್ಯಾಟರ್ನಂತೆ ಆಡಿದ ಅವರು ಎಚ್ಚರಿಕೆ ಮಿಶ್ರಿತ ಆಕ್ರಮಣದ ಆಟ ಆಡಿದರು. 20 ವರ್ಷ ವಯಸ್ಸಿನ ಪರಂತಾಪ್ ಜೊತೆ ಏಳನೇ ವಿಕೆಟ್ಗೆ ಉಪಯುಕ್ತ 61 ರನ್ ಸೇರಿಸಿದ್ದರಿಂದ ಕರ್ನಾಟಕ ಮೇಲುಗೈ ಸಾಧಿಸಿತು.

ಶ್ರೀಜಿತ್ ನಿರ್ಗಮನದ ಬಳಿಕ ಪರಂತಾಪ್ ಅವರು ಏಕಾಗ್ರತೆ ಕಳೆದುಕೊಳ್ಳಲಿಲ್ಲ. ಎಂಟನೇ ವಿಕೆಟ್ಗೆ ವಿದ್ಯಾಧರ ಪಾಟೀಲ್ (38, 62ಎ) ಜೊತೆ ಅಮೂಲ್ಯ 51 ರನ್ಗಳು ಬಂದು ಕರ್ನಾಟಕದ ಹಿಡಿತ ಬಲಗೊಂಡಿತು. ಈಗ ಅವರು ಚೆಂಡಿನಲ್ಲೂ ಉತ್ತಮ ಪ್ರದರ್ಶನ ನೀಡಿದರೆ ಕರ್ನಾಟಕಕ್ಕೆ ಅಗತ್ಯವಿರುವ ಜಯ ದಕ್ಕಬಹುದು.

ಉತ್ತರ ಪ್ರದೇಶದ ಆರಂಭ ಆಟಗಾರ ಮಾಧವ ಕೌಶಿಕ್ (ಬ್ಯಾಟಿಂಗ್ 33) ಮತ್ತು ನಾಯಕ ಆರ್ಯನ್ ಜುರೇಲ್ (ಬ್ಯಾಟಿಂಗ್ 35) ಅವರು ಮುರಿಯದ ಎರಡನೇ ವಿಕೆಟ್ಗೆ 70 ರನ್ ಸೇರಿಸಿ ಹೋರಾಟ ಕಾದಿರಿಸಿದ್ದಾರೆ.

ರಣಜಿಯಲ್ಲಿ ದಾಖಲೆ ಜೊತೆಯಾಟ

ಪೊರ್ವೊರಿಮ್, ಗೋವಾ: ಗೋವಾದ ಸ್ನೇಹಲ್ ಕೌಥಣಕರ್ (ಔಟಾಗದೇ 314) ಮತ್ತು ಕಶ್ಯಪ್ ಬಾಕ್ (ಔಟಾಗದೇ 300) ಅವರು ಮುರಿಯದ ಮೂರನೇ ವಿಕೆಟ್ಗೆ 606 ರನ್ ಸೇರಿಸಿ ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯವನ್ನು ಗೋವಾ ತಂಡವು ಇನಿಂಗ್ಸ್ ಮತ್ತು 551 ರನ್ಗಳಿಂದ ಗೆದ್ದಿದೆ.

ರಣಜಿ ಟ್ರೋಫಿ ಪ್ಲೇಟ್ ಲೀಗ್ ಗುಂಪಿನ ಅರುಣಾಚಲ ಪ್ರದೇಶದ ವಿರುದ್ಧ ಪಂದ್ಯದಲ್ಲಿ ಕಶ್ಯಪ್ ಮತ್ತು ಸ್ನೇಹಲ್ ಜೋಡಿಯು ದಾಖಲೆ ಬರೆದಿದೆ. ಈ ಮೂಲಕ 2016ರಲ್ಲಿ ದೆಹಲಿ ವಿರುದ್ಧ ಮಹಾರಾಷ್ಟ್ರದ ಎಸ್.ಎಂ.ಗುಗಳೆ ಮತ್ತು ಎ.ಆರ್.ಬಾವ್ನೆ ಅವರು ಮೂರನೇ ವಿಕೆಟ್ಗೆ ಜೊತೆಯಾಟದಲ್ಲಿ ನಿರ್ಮಿಸಿದ್ದ (ಮುರಿಯದ 594 ರನ್) ದಾಖಲೆಯನ್ನು ಮುರಿದಿದೆ. ಇದು ರಣಜಿ ಕ್ರಿಕೆಟ್ನಲ್ಲಿ ಯಾವುದೇ ವಿಕೆಟ್ನಲ್ಲಿ ಗರಿಷ್ಠ ರನ್ ಜೊತೆಯಾಟವಾಗಿದೆ.

ಬಿರುಸಿನ ಆಟವಾಡಿದ ಸ್ನೇಹಲ್, 215 ಎಸೆತಗಳನ್ನು ಎದುರಿಸಿ 146.04ರ ಸರಾಸರಿಯಲ್ಲಿ
ರನ್ ಕಲೆ ಹಾಕಿದರು. ಅವರು 45 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಿಡಿಸಿದರು. ಕಶ್ಯಪ್ 269 ಎಸೆತಗಳಲ್ಲಿ 111.52 ಸರಾಸರಿಯಲ್ಲಿ ರನ್ ಸೂರೆಗೈದರು. ಅದರಲ್ಲಿ 39 ಬೌಂಡರಿ ಮತ್ತು ಎರಡು ಸಿಕ್ಸರ್ ಒಳಗೊಂಡಿತ್ತು.

ರಣಜಿ ಟ್ರೋಫಿ ಟೂರ್ನಿಯಲ್ಲಿ ಇಬ್ಬರು ಬ್ಯಾಟರ್ಗಳು ಒಂದೇ ಇನಿಂಗ್ಸ್ನಲ್ಲಿ ತ್ರಿಶತಕ ದಾಖಲಿಸಿದ ಎರಡನೇ ನಿದರ್ಶನ ಇದಾಗಿದೆ. 1989ರಲ್ಲಿ ಗೋವಾ ವಿರುದ್ಧ ತಮಿಳುನಾಡಿನ ಡಬ್ಲ್ಯು.ವಿ. ರಾಮನ್ ಮತ್ತು ಅರ್ಜುನ್ ಕೃಪಾಲ್ ಸಿಂಗ್ ಕ್ರಮವಾಗಿ 313 ಮತ್ತು 302 ರನ್ ಗಳಿಸಿದ್ದರು.

ಅರುಣಾಚಲ ಪ್ರದೇಶ ತಂಡವು ಮೊದಲ ಇನಿಂಗ್ಸ್ನಲ್ಲಿ 84 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಗೋವಾ ತಂಡ ಎರಡು ವಿಕೆಟ್ಗೆ 727 ರನ್ ಗಳಿಸಿ, 643 ರನ್ ಇನಿಂಗ್ಸ್ ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಎರಡನೇ ಇನಿಂಗ್ಸ್ನಲ್ಲಿ ಅರುಣಾಚಲ ಪ್ರದೇಶ ತಂಡವು 92 ರನ್ಗೆ ಕುಸಿದು ಸೋಲೊಪ್ಪಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.