ಬೆಂಗಳೂರು: ದೈಹಿಕ, ಬೌದ್ಧಿಕ ಮತ್ತು ಮಾನಸಿಕ ವೈಕಲ್ಯ ಹೊಂದಿರುವ ವಯಸ್ಕರು ನಡೆಸುವ ಎನ್ಎಸ್ಆರ್ಸಿಇಎಲ್ ಬೆಂಬಲಿತ ‘ಮಿಟ್ಟಿ ಕೆಫೆ’ ಐಐಎಂ ಬೆಂಗಳೂರು ಕ್ಯಾಂಪಸ್ನಲ್ಲಿ ಪ್ರಾರಂಭಗೊಂಡಿತು.

ರಾಷ್ಟ್ರಪತಿ ಭವನ ಮತ್ತು ಸುಪ್ರೀಂ ಕೋರ್ಟ್, ವಿವಿಧ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳು ಸೇರಿ ದೇಶದ 35 ಕಡೆಗಳಲ್ಲಿ ‘ಮಿಟ್ಟಿ ಕೆಫೆ’ಗಳು ಆಹಾರ ಸೇವೆ ಒದಗಿಸುತ್ತಿವೆ.

ಐಐಎಂಬಿ ನಿರ್ದೇಶಕ ರಿಷಿಕೇಶ್ ಟಿ. ಕೃಷ್ಣನ್ ಮಾತನಾಡಿ, ‘ಮಿಟ್ಟಿ ಕೆಫೆಯು ದೈಹಿಕ, ಬೌದ್ಧಿಕ ಮತ್ತು ಮಾನಸಿಕ ವೈಕಲ್ಯ ಹೊಂದಿರುವ ವಯಸ್ಕರಿಗೆ ಮತ್ತು ಇತರ ದುರ್ಬಲ ಸಮುದಾಯಗಳ ವ್ಯಕ್ತಿಗಳಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವ ಕ್ರಮ’ ಎಂದು ವಿವರಿಸಿದರು.

‘ಮಿಟ್ಟಿ ಕೆಫೆ’ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲೀನಾ ಆಲಂ ಮಾತನಾಡಿ, ‘ಐಐಎಂಬಿಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಮಿಟ್ಟಿ ಕೆಫೆಗೆ ಅವಕಾಶ ಸಿಕ್ಕಿರುವುದು ಅಂಗವಿಕಲರ ಸಬಲೀಕರಣಕ್ಕೆ ಪ್ರಬಲ ಸಂದೇಶ ನೀಡಿದಂತಾಗಿದೆ. ಇದು ಸಮುದಾಯದೊಳಗೆ ಭರವಸೆ ಹುಟ್ಟಿಸಲಿದೆ ಮತ್ತು ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.