ಬೆಂಗಳೂರು: ‘ಸಾರ್ವಜನಿಕ ಸ್ವತ್ತನ್ನು ನುಂಗಿ ನೀರು ಕುಡಿದವರು, ಭೂಗಳ್ಳರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಭೂ ಅಕ್ರಮದ ಆರೋಪ ಮಾಡುತ್ತಿದ್ದಾರೆ’ ಎಂದು ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ ಟೀಕಿಸಿದ್ದಾರೆ.

‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬ ವರ್ಗ ಅಧಿಕಾರದಲ್ಲಿ ಇದ್ದಾಗ ನಡೆಸಿದ ಭೂ ಹಗರಣಗಳ ವಿವರವನ್ನು ಜನರ ಮುಂದೆ ಇಡಲಾಗಿದೆ. ಜೆಡಿಎಸ್ ನಾಯಕರು ಅನಗತ್ಯವಾಗಿ ಗೊಂದಲ ಮೂಡಿಸಲು ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಖುದ್ದು ಭೂ ಹಗರಣದಲ್ಲಿ ಭಾಗಿಯಾಗಿರುವ ಇವರ ಮಾತುಗಳನ್ನು ಕೇಳಿದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಭಾಸವಾಗುತ್ತದೆ. ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಮುಡಾ ಪ್ರಹಸನವನ್ನು ಮುಂದಿಟ್ಟುಕೊಂಡು, ಬಿಜೆಪಿ ಮತ್ತು ಜೆಡಿಎಸ್ ಮೈಸೂರಿಗೆ ಪಾದಯಾತ್ರೆ ಮಾಡುತ್ತಿವೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ವಾಸ್ತವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವದೆಹಲಿಗೆ ಪಾದಯಾತ್ರೆ ಮಾಡಬೇಕು. ಕೇಂದ್ರ ಸರ್ಕಾರವು ನಿರಂತರವಾಗಿ ಮಾಡುತ್ತಿರುವ ಅನ್ಯಾಯವನ್ನು ಪ್ರಶ್ನಿಸಬೇಕು. ಆದರೆ, ರಿಯಲ್ ಎಸ್ಟೇಟ್ ಏಜೆಂಟ್ಗಳ ರೀತಿಯಲ್ಲಿ ದಿನಕ್ಕೊಂದು ಕಥೆ ಹೇಳುತ್ತಾ ಪಾದಯಾತ್ರೆ ನಡೆಸಿದರೆ ಜನರು ನಂಬುತ್ತಾರೆಯೆ? ಅಧಿಕಾರ ಹಾಗೂ ಸುಳ್ಳು ಪ್ರತಿಪಾದನೆಗಾಗಿ ದೇಶದಲ್ಲಿ ನಡೆದ ಹೋರಾಟಗಳು ಅರ್ಧಕ್ಕೆ ಮುಳುಗಿ ಹೋಗಿವೆ. ಸಾಧ್ಯವಿದ್ದರೆ ನೀಟ್ ಅಕ್ರಮ, ಒಂದು ದೇಶ ಒಂದು ಚುನಾವಣೆ, ಕ್ಷೇತ್ರ ಪುನರ್ ವಿಂಗಡಣೆಯಂತಹ ವಿಷಯಗಳ ಬಗ್ಗೆ ಧ್ವನಿಯೆತ್ತಿ’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.