ಬೆಂಗಳೂರು: ಲಕ್ಕಸಂದ್ರದಲ್ಲಿ ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ, ಕಟ್ಟಡದ ಮಾಲೀಕ ಸುರೇಶ್ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

'50 ವರ್ಷಗಳ ಹಳೆಯ ಕಟ್ಟಡ ಹಲವು ದಿನಗಳ ಹಿಂದೆಯೇ ಬಿರುಕು ಬಿಟ್ಟಿತ್ತು. ಆದರೆ, ಮಾಲೀಕ ನಿರ್ಲಕ್ಷ್ಯ ವಹಿಸಿದ್ದ. ಕಟ್ಟಡ ತೆರವಿಗೆ ಪ್ರಯತ್ನಿಸಿರಲಿಲ್ಲ. ಕಟ್ಟಡದಲ್ಲಿರುವ ಕೊಠಡಿಗಳನ್ನು ಬಾಡಿಗೆ ಕೊಟ್ಟಿದ್ದ. ಪ್ರತಿ ತಿಂಗಳಯ ಬಾಡಿಗೆ ವಸೂಲಿ ಮಾಡಲು ಕಟ್ಟಡಕ್ಕೆ ಬಂದು ಹೋಗುತ್ತಿದ್ದ. ಬಾಡಿಗೆದಾರರು ಬಿರುಕಿನ ಬಗ್ಗೆ ಪ್ರಸ್ತಾಪಿಸಿದರೂ ಏನು ಆಗುವುದಿಲ್ಲವೆಂದು ಆತ ಹೇಳುತ್ತಿದ್ದ' ಎಂದು ಪೊಲೀಸ್ ಮೂಲಗಳು ಹೇಳಿವೆ.

'ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡದಲ್ಲಿ ವಾಸವಿದ್ದ ಕಾರ್ಮಿಕರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.'

ಇದನ್ನೂ ಓದಿ:ಬೆಂಗಳೂರಿನ ಲಕ್ಕಸಂದ್ರದಲ್ಲಿ ಬಹುಮಹಡಿ ಕಟ್ಟಡ ಕುಸಿತ

'ಆರೋಪಿ ಸುರೇಶ್ ತಲೆಮರೆಸಿಕೊಂಡಿದ್ದಾನೆ. ಕಟ್ಟಡಗಳ ಅವಶೇಷಗಳ ತೆರವು ನಡೆಯುತ್ತಿದೆ' ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.