ಬೆಂಗಳೂರು: ನಗರದ ಬ್ರಿಗೇಡ್ ರಸ್ತೆಯ ಒಪೇರಾ ಹೌಸ್ ಬಳಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಹಾರದೆ ಗೊಂದಲ ಸೃಷ್ಟಿಸಿತು. ಇದೇ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯನ್ನು ಎರಡು ಬಾರಿ ಹಾಡಲಾಯಿತು.

ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು.

ಎತ್ತರದ ಸ್ತಂಭದ ಮೇಲೆ 24*36 ಅಡಿ ವಿಸ್ತೀರ್ಣದ ಧ್ವಜವನ್ನು ಹಾರಿಸಲು ಉದ್ದೇಶಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ ಧ್ವಜಾರೋಹಣಕ್ಕೆ ಮುಂದಾದರು. ಹಲವು ಬಾರಿ ಎಳೆದರೂ ರಾಷ್ಟ್ರಧ್ವಜ ಬಿಚ್ಚಿಕೊಳ್ಳಲಿಲ್ಲ. ಸ್ಥಳದಲ್ಲಿದ್ದ ಹಲವರು ಸಹ ಮುಂದಾಗಿ ಹಗ್ಗವನ್ನು ಎಷ್ಟು ಜಗ್ಗಿದರೂ ಧ್ವಜ ಹಾರಲೇ ಇಲ್ಲ.

ಕೊನೆಗೆ ಧ್ವಜ ಸ್ತಂಭದ ಸಿಬ್ಬಂದಿ ಆಗಮಿಸಿ ಹ್ಯಾಂಡಲ್ ಮೂಲಕ ಧ್ವಜವನ್ನೇ ಕೆಳಗೆ ಇಳಿಸಿದರು. ಕೆಳಭಾಗದಲ್ಲೇ ಧ್ವಜವನ್ನು ಬಿಚ್ಚಿ ನಂತರ ಮೇಲೇರಿಸಲಾಯಿತು. ಅಷ್ಟು ಹೊತ್ತಿಗೆ ಸುಮಾರು 15 ನಿಮಿಷ ವ್ಯಯವಾಯಿತು.

ಧ್ವಜಾರೋಹಣದ ನಂತರ ರಾಷ್ಟ್ರಗೀತೆಗೂ ಆಯೋಜಕರು ಸಿದ್ಧತೆ ಮಾಡಿಕೊಂಡಿರಲಿಲ್ಲ. ರಾಷ್ಟ್ರಗೀತೆ ಆರಂಭವಾದ ಕೆಲ ಹೊತ್ತಿನಲ್ಲಿ ಮೊಟಕುಗೊಳಿಸಲಾಯಿತು. ಬಳಿಕ ಎರಡನೇ ಬಾರಿ ಪೂರ್ಣವಾಗಿ ರಾಷ್ಟ್ರಗೀತೆಯನ್ನು ಹಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.