ಬೆಂಗಳೂರು: ಹೊಸ ವಿದ್ಯುತ್ ಸಂಪರ್ಕ ನೀಡಲು ನಿಗದಿಪಡಿಸಿದ್ದ ಗರಿಷ್ಠ ಅವಧಿಯನ್ನು ಏಳು ದಿನಗಳಿಂದ ಮೂರು ದಿನಗಳಿಗೆ ಕಡಿತಗೊಳಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (ಕೆಇಆರ್‌ಸಿ) ಆದೇಶ ಹೊರಡಿಸಿದೆ.

ಈ ಆದೇಶದಿಂದಾಗಿ, ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದ ಹಲವು ಗ್ರಾಹಕರಿಗೆ ಪರಿಹಾರ ಸಿಕ್ಕಂತಾಗಿದೆ.

‘ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಗ್ರಾಹಕರ ಹಕ್ಕುಗಳ ಕಾರ್ಯಕ್ಷಮತೆಯ ಗುಣಮಟ್ಟ(ಎಸ್‌ಒಪಿ) ಮತ್ತು ಸಂಬಂಧಿತ ವಿಷಯಗಳು) ನಿಯಮಗಳು 2022’ ಅನ್ನು ತಿದ್ದುಪಡಿ ಮಾಡಿ ಈ ಅವಕಾಶ ಕಲ್ಪಿಸುವಂತೆ ಕೆಇಆರ್‌ಸಿ ಸೂಚಿಸಿದೆ.

ಹೊಸ ಆದೇಶದ ಅನ್ವಯ, ವಿದ್ಯುತ್ ಪೂರೈಕೆ ಕಂಪನಿಗಳು (ಎಸ್ಕಾಂಗಳು) ಮೆಟ್ರೊ ನಗರಗಳಲ್ಲಿ ಅರ್ಜಿ ಸ್ವೀಕರಿಸಿದ ಮೂರು ದಿನಗಳಲ್ಲಿ, ಪುರಸಭೆ ವ್ಯಾಪ್ತಿಯಲ್ಲಿ ಏಳು ದಿನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 15 ದಿನಗಳ ಒಳಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.

‘ಈ ಹೊಸ ಸಂಪರ್ಕಗಳಿಗೆ ವಿದ್ಯುತ್ ಸರಬರಾಜು ಮಾರ್ಗಗಳ ವಿಸ್ತರಣೆ ಅಥವಾ ಹೊಸ ಸಬ್‌ಸ್ಟೇಷನ್‌ಗಳ ಸ್ಥಾಪನೆಯ ಅಗತ್ಯವಿದ್ದರೆ, ವಿದ್ಯುತ್ ವಿತರಣಾ ಪರವಾನಗಿದಾರರು, 90 ದಿನಗಳೊಳಗೆ ವಿಸ್ತರಣೆ ಅಥವಾ ಸಬ್‌ಸ್ಟೇಷನ್ ಆರಂಭಿಸಿ ವಿದ್ಯುತ್ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆದೇಶದಲ್ಲಿ ತಿಳಿಸಿದೆ.

ಕೇಂದ್ರ ಇಂಧನ ಸಚಿವಾಲಯ ಕಳೆದ ಫೆಬ್ರವರಿ 22ರಂದು ಹೊರಡಿಸಿದ್ದ ಅಧಿಸೂಚನೆಯ ಅನ್ವಯ, ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು 2020ಕ್ಕೆ ತಿದ್ದುಪಡಿ ಮಾಡಬೇಕಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಈ ಹಿಂದಿನ ನಿಯಮದ ಪ್ರಕಾರ, ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ ಮೆಟ್ರೊ ನಗರಗಳ ಗ್ರಾಹಕರು ಏಳು ದಿನಗಳು, ಪುರಸಭೆ ವ್ಯಾಪ್ತಿಯವರು 15 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವವರು 30 ದಿನಗಳವರೆಗೂ ಕಾಯಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.