ಬೆಂಗಳೂರು: ಕೋರಮಂಗಲ ಹಾಗೂ ಎಂ.ಜಿ.ರಸ್ತೆಯಲ್ಲಿ ಕಿರುಕುಳ, ಹಲ್ಲೆ ಪ್ರಕರಣಗಳು ವರದಿಯಾಗಿವೆ.

ಕೋರಮಂಗಲದ 5ನೇ ಬ್ಲಾಕ್ 4ನೇ ಬಿ ರಸ್ತೆಯಲ್ಲಿ ಯುವತಿಯೊಬ್ಬರಿಗೆ ದುಷ್ಕರ್ಮಿಗಳು ಕಿರುಕುಳ ನೀಡಿದ್ದಾರೆ. ಸುದ್ದಿ ತಿಳಿದು ಪೊಲೀ
ಸರು ಸ್ಥಳಕ್ಕೆ ಬರುತ್ತಿದ್ದಂತೆ ಯುವತಿ ಕಣ್ಣೀರಿಟ್ಟರು. ದುಷ್ಕರ್ಮಿಗಳು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ.

ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣ ಎದುರೇ ಉತ್ತರ ಭಾರತದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಯುವಕನ ಮೂಗು ಹಾಗೂ ಬಾಯಿಯಲ್ಲಿ ರಕ್ತ ಸೋರುತ್ತಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸ್ಥಳಕ್ಕೆ ಬಂದ ಪೊಲೀಸರು, ಯುವಕನ ಸ್ನೇಹಿತರ ಸಹಾಯದಿಂದ ಆರೋಪಿಗಾಗಿ ಹುಡುಕಾಟ ನಡೆಸಿದರು.

ಬಿಗಿ ಭದ್ರತೆ: ಸಂಭ್ರಮಾಚರಣೆಗೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಇಂದಿರಾನಗರ ಹಾಗೂ ಕೋರಮಂಗಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೊದಲೇ ಸಿದ್ಧಪಡಿಸಲಾಗಿದ್ದ ಬ್ಯಾರಿಕೇಡ್ಗಳ ದಾರಿಯಲ್ಲಿ ಜನರನ್ನು ಮುಂದಕ್ಕೆ ಕಳುಹಿಸಲಾಯಿತು. ಬ್ಯಾರಿಕೇಡ್ ಸುತ್ತಲೂ ಪೊಲೀಸರ ಕಣ್ಗಾವಲು ಇತ್ತು.

ಎರಡೂ ರಸ್ತೆಯ ಅಕ್ಕ–ಪಕ್ಕದಲ್ಲಿ ಹೆಜ್ಜೆಹೆಜ್ಜೆಗೂ ಪೊಲೀಸ್ ಸಿಬ್ಬಂದಿ ನಿಂತುಕೊಂಡಿದ್ದರು. ಪ್ರತಿಯೊಂದು ಜಾಗವೂ ಸೆರೆಯಾಗು
ವಂತೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅದರ ದೃಶ್ಯಗಳೆಲ್ಲವೂ ಜನರಿಗೆ ಕಾಣುವಂತೆ ಎಲ್ಇಡಿ ಸ್ಕ್ರೀನ್ಗಳ ಮೂಲಕ ಪ್ರದರ್ಶಿಸಲಾಯಿತು. ಇದು ಹಲವರಿಗೆ ಎಚ್ಚರಿಕೆ ನೀಡಿದಂತಿತ್ತು.

ವಿಶೇಷವಾಗಿ ನಿರ್ಮಿಸಿದ್ದ ವೀಕ್ಷಣಾ ಗೋಪುರ ಮೇಲೆ ನಿಂತಿದ್ದ ಪೊಲೀಸರು, ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ಅದರ ಜೊತೆಗೆಯೇ ಡ್ರೋನ್ ಕ್ಯಾಮೆರಾಗಳನ್ನು ಹಾರಾಡಿಸಿ ದೃಶ್ಯ ಸೆರೆ ಹಿಡಿಯಲಾಯಿತು. ಮೆಟ್ರೊ ಕ್ಷಿಪ್ರ ಪಡೆಯ ಶಸ್ತ್ರಸಜ್ಜಿತ ಸಿಬ್ಬಂದಿ, ನಾಗರಿಕ ರಕ್ಷಣಾ ಪಡೆ ಸಿಬ್ಬಂದಿ, ಗೃಹ ರಕ್ಷಕರು ಹಾಗೂ ಹಲವು ರಕ್ಷಣಾ ಪಡೆಗಳ ಸಿಬ್ಬಂದಿ ಭದ್ರತೆಯಲ್ಲಿ ನಿರತರಾಗಿದ್ದರು.

ಪ್ರತ್ಯೇಕ ಪಥ: ಅತೀ ಸೂಕ್ಷ್ಮ ಸ್ಥಳವಾದ ಬ್ರಿಗೇಡ್ ರಸ್ತೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ಪ್ರತ್ಯೇಕ ಪಥವನ್ನೇ ನಿರ್ಮಿಸಲಾಗಿತ್ತು.

ರಸ್ತೆ ಪ್ರವೇಶಿಸುವ ಪ್ರತಿಯೊಬ್ಬರನ್ನು ಲೋಹ ಶೋಧಕದಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಬ್ಯಾಗ್ಗಳ ಪರಿಶೀಲನೆ ನಡೆಸಲಾಯಿತು. ಬ್ರಿಗೇಡ್ ರಸ್ತೆಯಲ್ಲಿ ಹೋದವರನ್ನು ರೆಸಿಡೆನ್ಸಿ ರಸ್ತೆ ಮೂಲಕ ಹೊರಗೆ ಕಳುಹಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.