ಬೆಂಗಳೂರು: ಕಾರು ಚಾಲನೆ ಮಾಡುತ್ತಲೇ ಮೊಬೈಲ್ ಬಳಸಿ ಸೆಲ್ಫಿ ವಿಡಿಯೊ ಚಿತ್ರೀಕರಿಸಿರುವ ಆರೋಪದಡಿ ನಟಿ ಸಂಜನಾ ಗರ್ಲಾನಿ ಅವರಿಗೆ ನೋಟಿಸ್ ನೀಡಲು ಸಂಚಾರ ಪೊಲೀಸರು ಚಿಂತನೆ ನಡೆಸಿದ್ದಾರೆ.

ಸ್ನೇಹಿತರೊಬ್ಬರ ಜೊತೆ ಇತ್ತೀಚೆಗೆ ಕಾರಿನಲ್ಲಿ ಹೊರಟಿದ್ದ ಸಂಜನಾ, ಚಾಲನೆ ಮಾಡುತ್ತಲೇ ವಿಡಿಯೊ ಚಿತ್ರೀಕರಿಸಿದ್ದರು. ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ, ಸಂಜನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅವರಿಗೆ ಸೋಮವಾರ ಸೂಚನೆ ನೀಡಿದ್ದಾರೆ.

‘ಜನರಿಗೆ ಮಾದರಿಯಾಗಬೇಕಾದ ಸೆಲೆಬ್ರಿಟಿಗಳೇ ಈ ರೀತಿ ಸಂಚಾರ ನಿಯಮ ಉಲ್ಲಂಘಿಸುವುದು ಸರಿಯಲ್ಲ. ಇಂಥ ಕೆಲಸ ಯುವಜನತೆಯನ್ನು ದಾರಿ ತಪ್ಪಿಸುತ್ತದೆ. ಹೀಗಾಗಿ ಸಂಜನಾ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸ್ಪಷ್ಟನೆ ಕೇಳಿ ಸಂಜನಾ ಅವರಿಗೆ ಸಂಬಂಧಪಟ್ಟ ಠಾಣೆ ಇನ್ಸ್ಪೆಕ್ಟರ್ ಅವರೇ ಮಂಗಳವಾರ ನೋಟಿಸ್ ನೀಡಲಿದ್ದಾರೆ. ಅವರ ಉತ್ತರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.