ಬೆಂಗಳೂರು: ವೈವಾಹಿಕ ಜಾಲತಾಣ ದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ನಗರದ ಯುವತಿಯೊಬ್ಬರಿಂದ ₹ 1.15 ಲಕ್ಷ ಪಡೆದು ವಂಚಿಸಿದ್ದು, ಈ ಬಗ್ಗೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸಾಫ್ಟ್ವೇರ್ ಎಂಜಿನಿಯರ್ ಆಗಿರುವ 26 ವರ್ಷದ ಯುವತಿ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ದುಗ್ಗಾ ವೆಂಕಟೇಶ್ವರ್ ರೆಡ್ಡಿ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶಾದಿ ಡಾಟ್ ಕಾಮ್ ಜಾಲತಾಣ ದಲ್ಲಿ ಯುವತಿ ಖಾತೆ ತೆರೆದಿದ್ದರು. ಜಾಲತಾಣದಲ್ಲಿ ಯುವತಿಯನ್ನು ಸಂಪ ರ್ಕಿಸಿದ್ದ ಆರೋಪಿ, ನೆದರ್ಲೆಂಡ್ ನಲ್ಲಿ ಸಿವಿಲ್ ಎಂಜಿನಿಯರ್ ಆಗಿರುವುದಾಗಿ ಹೇಳಿದ್ದ. ಮದುವೆ ಯಾಗುವುದಾಗಿ ಹೇಳಿ ಚಾಟಿಂಗ್ ಮಾಡಿದ್ದ ಇಬ್ಬರೂ ಮೊಬೈಲ್ ನಂಬರ್ ಸಹ ವಿನಿಮಯ ಮಾಡಿಕೊಂಡಿದ್ದರು.’ ‘ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದು, ಕೋವಿಡ್ ಕಾರಣದಿಂದ ವಿಮಾನದ ಟಿಕೆಟ್ ಸಿಗುತ್ತಿಲ್ಲ. ಹೀಗಾಗಿ, ನನ್ನ ಲಗೇಜು ಮಾತ್ರ ಭಾರತಕ್ಕೆ ಕಳುಹಿಸು ತ್ತಿದ್ದೇನೆ. ಅದರಲ್ಲಿ ಬೆಲೆಬಾಳುವ ವಸ್ತುಗಳಿವೆ. ತೆಗೆದುಕೊಳ್ಳಿ’ ಎಂದು ಆರೋಪಿ ತಿಳಿಸಿದ್ದ. ಮರುದಿನ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು, ‘ನಿಮ್ಮ ಹೆಸರಿಗೆ ಲಗೇಜು ಬಂದಿದೆ. ಶುಲ್ಕ ಪಾವತಿಸಿ’ ಎಂದಿದ್ದರು. ಅದನ್ನು ನಂಬಿದ್ದ ಯುವತಿ, ₹ 1.15 ಲಕ್ಷ ಪಾವತಿಸಿದ್ದರು. ನಂತರ ಲಗೇಜು ಬಂದಿಲ್ಲ. ಆರೋಪಿಗಳೂ ನಾಪತ್ತೆಯಾಗಿ ದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.