ಬೆಂಗಳೂರು: ಪಾದರಾಯನಪುರದ ವಾರ್ಡ್ ಸಂಖ್ಯೆ 135ರ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಿಗೆ ಮುಸ್ಲಿಂ ಮುಖಂಡರ ಹೆಸರುಗಳನ್ನು ಮಾತ್ರ ನಾಮಕರಣ ಮಾಡಲು ಮುಂದಾಗಿರುವ ಬಿಬಿಎಂಪಿ ನಿರ್ಧಾರಕ್ಕೆ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಈ ನಿರ್ಣಯವನ್ನು ರದ್ದುಗೊಳಿಸಬೇಕು ಎಂದು ಬಿಬಿಎಂಪಿ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪಾದರಾಯನಪುರದ 11 ರಸ್ತೆಗಳಿಗೆ ಸಮಾಜ ಸೇವಕರ ಹೆಸರು ಇಡುವ ಬಗ್ಗೆ ಬಿಬಿಎಂಪಿಯ ಸೆ.8ರ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಅದರಂತೆ ಬಿಬಿಎಂಪಿಯು ಡಿ.16ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಆದರೆ, ಈ ಪ್ರದೇಶದ ಎಲ್ಲ ರಸ್ತೆಗಳಿಗೆ ಮುಸ್ಲಿಂ ಮುಖಂಡರ ಹೆಸರು ಮಾತ್ರ ಇಟ್ಟಿರುವುದು ಸರಿಯಲ್ಲ ಎಂದು ಸಂಸದರಾದ ಅನಂತಕುಮಾರ್ ಹೆಗಡೆ, ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿಯ ಅನೇಕರ ನಾಯಕರು ಹೇಳಿದ್ದಾರೆ.

‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ಮುಸಲ್ಮಾನರ ಹೆಸರುಗಳನ್ನೇ ಶಿಫಾರಸ್ಸು ಮಾಡಿರುವ ಬಿಬಿಎಂಪಿಯ ನಿರ್ಧಾರವು ಭಾರತ, ಪಾಕಿಸ್ತಾನ ವಿಭಜನೆಗೆ ಮೂಲವಾಗಿದ್ದ ದ್ವಿರಾಷ್ಟ್ರ ಸಿದ್ಧಾಂತದ ಪಳಿಯುಳಿಕೆಯಂತಿದೆ. ಈ ಪ್ರಸ್ತಾವಕ್ಕೆ ನನ್ನ ಸಂಪೂರ್ಣ ವಿರೋಧ ಮತ್ತು ಆಕ್ಷೇಪವಿದೆ. ಪಾಲಿಕೆಯು ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿದು, ಕೇವಲ ಮುಸ್ಲಿಂ ಹೆಸರುಗಳ ನಾಮಕರಣ ಪ್ರಕ್ರಿಯೆಯನ್ನು ಹಿಂಪಡೆಯಬೇಕು’ ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.