ಬೆಂಗಳೂರು: ಪೆರಿಫೆರಲ್ ವರ್ತುಲ ರಸ್ತೆ (ಪಿಪಿಆರ್) ನಿರ್ಮಾಣದ ಸಂದರ್ಭದಲ್ಲಿಸಾಧ್ಯವಾದಷ್ಟು ಮರಗಳನ್ನು ಉಳಿಸಲಾಗುತ್ತದೆ. ವಿವಿಧ ಮರಗಳನ್ನು ಸ್ಥಳಾಂತರಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಭರವಸೆ ನೀಡಿದರು.

ನಮ್ಮ ಬೆಂಗಳೂರು ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪಿಪಿಆರ್ ಯೋಜನೆ ಅನುಷ್ಠಾನದಲ್ಲಿ ಪರಿಸರ ರಕ್ಷಣೆಗೆ ಗರಿಷ್ಠ ಪ್ರಯತ್ನ ಮಾಡಲಾಗುವುದು ಎಂದರು.

‘73.5 ಕಿ.ಮೀ ಪಿಪಿಆರ್ ಅಭಿವೃದ್ಧಿಗಾಗಿ ಸುಮಾರು 33 ಸಾವಿರ ಮರಗಳನ್ನು ಕಡಿಯುವ ಬಗ್ಗೆ ಪರಿಸರವಾದಿಗಳು ಮತ್ತು ಬೆಂಗಳೂರಿನ ನಾಗರಿಕರಿಗೆ ಕಳವಳ ಉಂಟುಮಾಡಿದೆ. ಈ ಯೋಜನೆಯು ಜಾರಕಬಂಡೆಕಾವಲ್ನಲ್ಲಿರುವ ಅರಣ್ಯ ಭೂಮಿ ಮತ್ತು ಆರು ಜಲಮೂಲಗಳ ಮೇಲೂ ಪರಿಣಾಮ ಬೀರಲಿದೆ’ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ ವಿನೋದ್ ಜೇಕಬ್ ಹೇಳಿದರು.

‘ಯೋಜನೆಗೆ ಮೊದಲು ಸಂಪೂರ್ಣ ಅಧ್ಯಯನ ನಡೆಸಬೇಕು. ಡಿಪಿಆರ್ ಅನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಮರಗಳನ್ನು ಉಳಿಸಲು ತಜ್ಞರಿಂದ ಸಲಹೆ ಪಡೆಯಬೇಕು. ಪರಿಸರದ ಮೇಲಾಗುವ ಮೌಲ್ಯಮಾಪನ ವರದಿಯನ್ನು ಪ್ರಕಟಿಸಬೇಕು’ ಎಂದು ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.