ಬೆಂಗಳೂರು: ‘2024ರ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲು ಸಿದ್ಧರಾಗಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಡಿ. 31ರಂದು ರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮದ್ಯದ ಅಂಗಡಿಗಳ ವಹಿವಾಟಿಗೆ ರಾತ್ರಿ 11 ಗಂಟೆಯವರೆಗೂ ಅವಕಾಶವಿದೆ. ಬಾರ್ ಆ್ಯಂಡ್ ರೆಸ್ಟೊರೆಂಟ್, ಪಬ್, ಹೋಟೆಲ್ ಹಾಗೂ ಇತರೆ ವ್ಯಾಪಾರ ಸ್ಥಳಗಳನ್ನು ರಾತ್ರಿ 1 ಗಂಟೆಯೊಳಗೆ ಬಂದ್ ಮಾಡಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

‘ಹೆಚ್ಚು ಜನರು ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಹಾಗೂ ಇತರೆ ಸ್ಥಳಗಳ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ನಗರದ ಪ್ರತಿಯೊಂದು ಸ್ಥಳದಲ್ಲೂ ಪೊಲೀಸರ ಗಸ್ತು ಇರಲಿದೆ. ಭದ್ರತೆ ಹೊಣೆಯನ್ನು ಇಬ್ಬರು ಹೆಚ್ಚುವರಿ ಪೊಲೀಸ್ ಕಮಿಷನರ್ ಹಾಗೂ ಜಂಟಿ ಕಮಿಷನರ್ ವಹಿಸಲಾಗಿದೆ’ ಎಂದು ದಯಾನಂದ್ ಹೇಳಿದರು.

‘ವೈದ್ಯರು, ಬೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳೂ ಪೊಲೀಸರ ಜೊತೆಗಿರಲಿದ್ದಾರೆ’ ಎಂದರು.

48 ಕಡೆ ಮದ್ಯ ತಪಾಸಣೆ: ‘ಮದ್ಯ ಕುಡಿದು ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ, ಪಾನಮತ್ತ ಚಾಲಕರನ್ನು ಪತ್ತೆ ಮಾಡಲು 48 ಸ್ಥಳಗಳಲ್ಲಿ ತಪಾಸಣೆ ತಂಡಗಳನ್ನು ರಚಿಸಲಾಗಿದೆ. ಮದ್ಯ ಕುಡಿದು ವಾಹನ ಚಾಲನೆ ಖಾತ್ರಿಯಾದರೆ ಪ್ರಕರಣ ದಾಖಲಿಸಲಾಗುವುದು. ವಾಹನ ಜಪ್ತಿ ಮಾಡಲಾಗುವುದ’ ಎಂದು ಕಮಿಷನರ್ ತಿಳಿಸಿದರು.

‘ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೂ ಒತ್ತು ನೀಡಲಾಗಿದೆ. ಜನಸಂದಣಿ ಸ್ಥಳಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಮಹಿಳೆಯರ ದೂರು ಆಲಿಸಿ ಕ್ರಮ ಕೈಗೊಳ್ಳಲು ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಸ್ಥಳಗಳಲ್ಲಿ ನಿಗಾ ವಹಿಸಲು ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗುತ್ತಿದೆ. ಗೋಪುರಗಳಲ್ಲಿ ಸಿಬ್ಬಂದಿ ಇರಲಿದ್ದಾರೆ. ಅನುಮಾನಾಸ್ಪದ ವಸ್ತು ಹಾಗೂ ವ್ಯಕ್ತಿಗಳು ಕಂಡುಬಂದರೆ ತ್ವರಿತವಾಗಿ ಸ್ಪಂದಿಸಲಿದ್ದಾರೆ’ ಎಂದು ಅವರು ಹೇಳಿದರು.

‘ನಗರದ ಹಲವು ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಕೆಲಸ ಆರಂಭವಾಗಿದೆ. ಭದ್ರತೆಗಾಗಿ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಸಾರ್ವಜನಿಕ ಸ್ಥಳದ ಪ್ರತಿಯೊಂದು ದೃಶ್ಯವನ್ನು ಚಿತ್ರೀಕರಿಸಿಟ್ಟುಕೊಳ್ಳಲಾಗುವುದು. ಯಾವುದಾದರೂ ಅವಘಡ ಸಂಭವಿಸಿದರೆ, ಆರೋಪಿ ಪತ್ತೆಗೆ ದೃಶ್ಯಗಳು ನೆರವಾಗಲಿವೆ’ ಎಂದು ಅವರು ತಿಳಿಸಿದರು.

ಡ್ರಗ್ಸ್ ವಿರುದ್ಧ ಕಾರ್ಯಾಚರಣೆ: ‘ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡ್ರಗ್ಸ್ ಸಾಗಣೆ ಹಾಗೂ ಮಾರಾಟವನ್ನು ತಡೆಯಲು ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಕಮಿಷನರ್ ದಯಾನಂದ್ ಹೇಳಿದರು.

‘26 ದಿನಗಳಲ್ಲಿ 9 ವಿದೇಶಿ ಪ್ರಜೆಗಳು ಸೇರಿ 56 ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 99.85 ಕೆ.ಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದರು.

‘ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡ್ರಗ್ಸ್ ಸೇವನೆ ಮಾಡಿದವರನ್ನು ಪತ್ತೆ ಮಾಡಲು ವಿಶೇಷ ತಂಡಗಳನ್ನು ರಚಿಸಲಾಗುತ್ತಿದೆ. ಅನುಮಾನ ಬಂದವರನ್ನು ವಶಕ್ಕೆ ಪಡೆದು ರಕ್ತದ ಮಾದರಿ ಸಂಗ್ರಹಿಸಲಾಗುವುದು. ವೈದ್ಯಕೀಯ ವರದಿ ಬಂದ ನಂತರ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಲಾಗುವುದು’ ಎಂದು ದಯಾನಂದ್ ತಿಳಿಸಿದರು.

Cut-off box - ‘ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣ 3 ಗಂಟೆ ಬಂದ್’ ‘ಹೊಸ ವರ್ಷಾಚರಣೆಗೆ ನಗರ ಎಂ.ಜಿ. ರಸ್ತೆಯಲ್ಲಿ ಅತೀ ಹೆಚ್ಚು ಜನರು ಸೇರುತ್ತಾರೆ. ಕಳೆದ ವರ್ಷ ಮೆಟ್ರೊ ನಿಲ್ದಾಣದೊಳಗೆ ಹೋಗುವಾಗ ಜನರಿಗೆ ತೊಂದರೆ ಆಗಿತ್ತು. ಹೀಗಾಗಿ ಈ ವರ್ಷ ಡಿ. 31ರಂದು ರಾತ್ರಿ 11 ಗಂಟೆಯಿಂದ 2 ಗಂಟೆಯವರೆಗೆ ನಿಲ್ದಾಣದ ಬಾಗಿಲುಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ’ ಎಂದು ಕಮಿಷನರ್ ದಯಾನಂದ್ ಹೇಳಿದರು. ‘ಸಾರ್ವಜನಿಕರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಎಂ.ಜಿ.ರಸ್ತೆ ನಿಲ್ದಾಣದ ಬದಲು ಸಮೀಪದ ಟ್ರಿನಿಟಿ ವೃತ್ತ ಹಾಗೂ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಮೂಲಕ ಜನರು ಪ್ರಯಾಣಿಸಬಹುದು’ ಎಂದು ತಿಳಿಸಿದರು.

Cut-off box - ಭದ್ರತೆಗೆ ಪೊಲೀಸರ ಬಲ ಡಿಸಿಪಿಗಳು – 15 ಎಸಿಪಿಗಳು 45 ಇನ್ಸ್ಪೆಕ್ಟರ್ಗಳು – 160 ಪಿಎಸ್ಐಗಳು – 600 ಎಎಸ್ಐಗಳು – 600 ಹೆಡ್ ಕಾನ್ಸ್ಟೆಬಲ್ಗಳು – 1800 ಹೆಡ್ ಕಾನ್ಸ್ಟೆಬಲ್ಗಳು – 5200

Cut-off box - ‘ಮೇಲ್ಸೇತುವೆಗಳಲ್ಲಿ ಸಂಚಾರ ಬಂದ್’ ‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿರುವ ಮೇಲ್ಸೇತುವೆಯನ್ನು ಹೊರತುಪಡಿಸಿ ನಗರದ ಎಲ್ಲ ಮೇಲ್ಸೇತುವೆಗಳನ್ನು ಡಿ. 31ರಂದು ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಬಂದ್ ಮಾಡಲಾಗುವುದು’ ಎಂದು ಕಮಿಷನರ್ ದಯಾನಂದ್ ಹೇಳಿದರು.

Cut-off box - ಸಾರ್ವಜನಿಕರ ವಾಹನಗಳ ಸಂಚಾರ ನಿರ್ಬಂಧ (ಡಿ. 31ರಂದು ರಾತ್ರಿ 8 ಗಂಟೆಯಿಂದ 1 ಗಂಟೆಯವರೆಗೆ) * ಎಂ.ಜಿ. ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೊಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ * ಬ್ರಿಗೇಡ್ ರಸ್ತೆ (ಕಾವೇರಿ ಎಂಪೋರಿಯಂ ಜಂಕ್ಷನ್ನಿಂದ ಅಪೇರಾ ಜಂಕ್ಷನ್) * ಚರ್ಚ್ಸ್ಟ್ರೀಟ್ (ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಮ್ಯೂಸಿಯಂ ಜಂಕ್ಷನ್) * ಮ್ಯೂಸಿಯಂ ರಸ್ತೆ (ಎಂ.ಜಿ.ರಸ್ತೆ ಜಂಕ್ಷನ್ನಿಂದ ಹಳೇ ಮದ್ರಾಸ್ ರಸ್ತೆಯ ಎಸ್ಬಿಐ ವೃತ್ತ) * ರೆಸ್ಟ್ ಹೌಸ್ ರಸ್ತೆ (ಮ್ಯೂಸಿಯಂ ರಸ್ತೆ ಜಂಕ್ಷನ್ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್) * ರೆಸಿಡೆನ್ಸಿ ರಸ್ತೆ ಜಂಕ್ಷನ್ನಿಂದ ಎಂ.ಜಿ.ರಸ್ತೆ ಜಂಕ್ಷನ್ (ಮೇಲಿನ ಎಲ್ಲ ರಸ್ತೆಗಳಲ್ಲಿ ಡಿ. 31ರಂದು ಸಂಜೆ 4 ಗಂಟೆಯಿಂದ ರಾತ್ರಿ 3 ಗಂಟೆಯವರೆಗೆ ಎಲ್ಲ ಪ್ರಕಾರದ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ)

Cut-off box - ತುರ್ತು ಸಂದರ್ಭದಲ್ಲಿ 112ಕ್ಕೆ ಕರೆಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.