ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯವು ಬಿ.ಟೆಕ್ ಪದವಿ ಪ್ರವೇಶಕ್ಕೆ ನಡೆಸುವ ಅಭಿಕ್ಷಮತೆ ಪರೀಕ್ಷಾ ಪ್ರಕ್ರಿಯೆಯ (ಪಿಇಎಸ್‌ಎಸ್‌ಎಟಿ) ದಿನಾಂಕಗಳನ್ನು ಘೋಷಿಸಲಾಗಿದೆ.

ಬೆಂಗಳೂರು, ದೆಹಲಿ, ಕೋಲ್ಕತ್ತ, ಹೈದರಾಬಾದ್, ವಿಜಯವಾಡ ಮತ್ತು ಮುಂಬೈ ಸೇರಿದಂತೆ ದೇಶದ 35 ಕೇಂದ್ರಗಳಲ್ಲಿ ಆಗಸ್ಟ್ 1ರಿಂದ 20ರವರೆಗೆ ನಡೆಯುತ್ತದೆ. 2020ರ ಪಿಇಎಸ್‌ಎಸ್‌ಎಟಿ ಸ್ಲಾಟ್ ಬುಕ್ಕಿಂಗ್ ಜುಲೈ 26ರಿಂದಲೇ ಪ್ರಾರಂಭವಾಗಲಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.

ಕೋವಿಡ್–19ಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಪರೀಕ್ಷಾ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅದು ಹೇಳಿದೆ.

ಮಾಹಿತಿಗೆ,ದೂರವಾಣಿ 080–2672 4781, ಅಥವಾ ವೆಬ್‌ಸೈಟ್ www.pes.edu ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.