ಬೆಂಗಳೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಶ್ರೇಷ್ಠ ಸಾಧಕರಾಗಬೇಕು ಎಂದು ನಿರ್ಧರಿಸಿದ ದಿನವೇ ಭವಿಷ್ಯದ ಯಶಸ್ಸು ನಿಶ್ಚಿತವಾಗುತ್ತದೆ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್.ದೊರೆಸ್ವಾಮಿ ಹೇಳಿದರು.

ಬುಧವಾರ ಹಮ್ಮಿಕೊಂಡಿದ್ದ ಪಿಇಎಸ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಯಾನಂದ್ ಸಾಗರ್ ಸಂಸ್ಥೆಗಳನ್ನು ನಡೆಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರಿಂದಲೇ ಪಿಇಎಸ್ ಸಂಸ್ಥೆ ಹುಟ್ಟುಹಾಕಲು ಸಾಧ್ಯವಾಯಿತು. ಇಂದು ಪಿಇಎಸ್ ಬೆಂಗಳೂರು ವಿಶ್ವವಿದ್ಯಾಲಯದಲ್ಲೇ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.

1972ರಲ್ಲಿ ಅಸ್ತಿತ್ವಕ್ಕೆ ಬಂದ ಶಿಕ್ಷಣ ಸಂಸ್ಥೆಯಲ್ಲಿ ಇಂದು 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಿಕ್ಷಣದ ಗುಣಮಟ್ಟದಲ್ಲಿ ಎಂದೂ ರಾಜಿಯಾಗಿಲ್ಲ. ಇದಕ್ಕೆಲ್ಲ ಆಡಳಿತ ಮಂಡಳಿ, ಉಪನ್ಯಾಸಕರ ಬದ್ಧತೆಯೇ ಕಾರಣ ಎಂದು ಹೇಳಿದರು.

ಇನ್‌ಮೊಬಿ ಗ್ರೂಪ್ ಸಂಸ್ಥಾಪಕ ಸಿಇಒ ನವೀನ್ ತಿವಾರಿ, ಮಾರ್ಕೆಟಿಂಗ್ ಲೊವೆಸ್ ಸರ್ವಿಸಸ್ ಇಂಡಿಯಾದ ಹಿರಿಯ ನಿರ್ದೇಶಕಿ ರಮ್ಯಾ ವಿಶ್ವನಾಥ್, ಶ್ರವಣದೋಷದ ಮಕ್ಕಳಿಗೆ ಅಗ್ಗದ ದರದಲ್ಲಿ ಶ್ರವಣ ಸಾಧನ ಕಂಡು ಹಿಡಿದ ರಾಮನ್, ಲಕ್ಷ್ಮಣನ್, ಐಎಎಸ್ ಅಧಿಕಾರಿ ಶ್ರೇಯಸ್ ಹೊಸೂರ್, ಜೆ. ಸೂರ್ಯಪ್ರಸಾದ್, ಸಮ ಕುಲಪತಿ ಡಿ.ಜವಾಹರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.