ಬೆಂಗಳೂರು: ಕೊರೊನಾ ವೈರಸ್ ಭೀತಿಯನ್ನು ಹೋಗಲಾಡಿಸಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸಂಚಾರ ಪೊಲೀಸರು ‘ಕೈ ತೊಳೆಯಿರಿ’ ಅಭಿಯಾನ ಹಮ್ಮಿಕೊಂಡಿದ್ದಾರೆ. ನಗರದ ಹಲವು ವೃತ್ತ ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ನಿಂತುಕೊಂಡು ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುತ್ತಿದ್ದಾರೆ.

ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು, ಮೆಟ್ರೊ ನಿಲ್ದಾಣ ಪ್ರವೇಶ ದ್ವಾರದಲ್ಲಿ ಶುಕ್ರವಾರ ಕರಪತ್ರ ಹಂಚಿದರು. ‘ಕೈ ಹೇಗೆ ತೊಳೆಯಬೇಕು’ ಎಂಬ ಬಗ್ಗೆ ಪುರಭವನ ಎದುರು ಪ್ರಾತ್ಯಕ್ಷಿಕೆಯನ್ನೂ ನೀಡಿದರು.

ಪುರಭವನ ವೃತ್ತದ ಸಿಗ್ನಲ್ನಲ್ಲಿ ವಾಹನಗಳು ನಿಲ್ಲುತ್ತಿದ್ದಂತೆ ಪ್ರಾತ್ಯಕ್ಷಿಕೆ ಆರಂಭಿಸಿದ ಪೊಲೀಸರು, ಕೊರೊನಾ ವೈರಸ್ ಹರಡುವಿಕೆಯನ್ನು ತಪ್ಪಿಸುವುದು ಹೇಗೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿಕೊಟ್ಟರು.

‘ಕೊರೊನಾ ವೈರಸ್ ಹರುಡುವಿಕೆಯನ್ನು ನಾವು ತಪ್ಪಿಸಬೇಕು. ಹೀಗಾಗಿ, ಪ್ರತಿಯೊಬ್ಬರು ಜಾಗೃತಿ ವಹಿಸಬೇಕು. ಕೈ ತೊಳೆಯದೇ ಮುಖ ಮುಟ್ಟಿಕೊಳ್ಳಬಾರದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನ’ ಎಂದು ಪೊಲೀಸರು ಹೇಳಿದರು.

ಅಗತ್ಯವಿದ್ದರೆ ಮಾತ್ರ ಪೊಲೀಸರು ಠಾಣೆಯಿಂದ ಹೊರಕ್ಕೆ

ಬೆಂಗಳೂರು: ‘ದೇಶದಾದ್ಯಂತ ಭಾನುವಾರ ಜನತಾ ಕರ್ಫ್ಯೂ ಇರಲಿದ್ದು, ಆ ದಿನ ಪೊಲೀಸರು ಸಹ ಠಾಣೆಯೊಳಗೆ ಇರಲಿದ್ದಾರೆ. ಅಗತ್ಯವಿದ್ದರೆ ಮಾತ್ರ ಹೊರಗಡೆ ಬರಲಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಹೇಳಿದರು.

‘ಪೊಲೀಸರೂ ಜನಸೇವಕರು. ಭಾನುವಾರ ಠಾಣೆಗಳಲ್ಲಿ ಹಾಗೂ ನಿಗದಿಪಡಿಸಿದ ಸ್ಥಳಗಳಲ್ಲಿ ಪೊಲೀಸರು ಕರ್ತವ್ಯದಲ್ಲಿ ಇರಲಿದ್ದಾರೆ’ ಎಂದರು.

‘ಪೊಲೀಸ್ ನಿಯಂತ್ರಣ ಕೊಠಡಿ ಮಾತ್ರ ಇರಲಿದೆ. ಯಾವುದೇ ತುರ್ತು ಸಮಯದಲ್ಲೂ ಸಾರ್ವಜನಿಕರು ನಿಯಂತ್ರಣ ಕೊಠಡಿಗೆ ಕರೆ ಮಾಡ
ಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.