ಕೆಂಗೇರಿ: ಐದು ಗ್ಯಾರಂಟಿಗಳೊಂದಿಗೆ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ಸರ್ಕಾರ ಖಾತ್ರಿಗೊಳಿಸಲಿ ಎಂದು ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಒತ್ತಾಯಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಂಸ್ಥಾಪಕ ಎಂ.ಎಚ್. ಜಯಪ್ರಕಾಶ್ ನಾರಾಯಣ್ ಅವರ 97ನೇ ಜನ್ಮ ದಿನ ಹಾಗೂ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಶಿಕ್ಷಣ ಮತ್ತು ಆರೋಗ್ಯ ಸೇವೆ ತುಟ್ಟಿಯಾಗಿದೆ. ಸಾಮಾನ್ಯ ಜನರ ಜೀವನವನ್ನು ದುಬಾರಿಯಾಗಿಸಿದೆ. ಸರ್ಕಾರಗಳು ಈ ಎರಡು ಪ್ರಮುಖ ಮೂಲ ಸೌಕರ್ಯದತ್ತ ಗಮನ ಹರಿಸಬೇಕಿದೆ ಎಂದರು.

ಪಿವಿಪಿ ಟ್ರಸ್ಟಿ ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಎಂ.ಎಚ್. ಜಯಪ್ರಕಾಶ್ ಅವರ ದೂರದೃಷ್ಟಿಯ ಫಲವಾದ ಪಿವಿಪಿ ಟ್ರಸ್ಟಿನಲ್ಲಿ ಪ್ರಸ್ತುತ 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 23 ಅಂಗ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಎಸ್. ಮರಿಸ್ವಾಮಿ, ಕಾರ್ಯದರ್ಶಿ ಎಸ್. ಶಿವಮಲ್ಲು, ಖಜಾಂಚಿ ಎಂ. ಮಹದೇವ, ಎನ್.ಸಿ.ಶಿವಪ್ರಕಾಶ, ಎಲ್.ಎಂ.ಪಟ್ನಾಯಕ್, ಪ್ರಾಂಶುಪಾಲರಾದ ಎಂ. ಮೀನಾಕ್ಷಿ, ಉಪ ಪ್ರಾಂಶುಪಾಲ ಡಾ.ಸಿದ್ದರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.