ಬೆಂಗಳೂರು: ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ ಕಾದಂಬರಿ ಈಗ ಡಿಜಿಟಲ್ ರೂಪದಲ್ಲೂ ಲಭ್ಯ.ಆಸಕ್ತ ಕನ್ನಡದ ಓದುಗರು ಪ್ರಪಂಚದ ಯಾವುದೇ ಮೂಲೆಯಲ್ಲೂ ತಮ್ಮ ಮೊಬೈಲ್ ಅಥವಾ ಐಪ್ಯಾಡ್ನಲ್ಲಿ ‘ಕರ್ವಾಲೊ’ ಕೃತಿಯನ್ನು ಕೊಂಡು ಓದಬಹುದು. ಮೈಲ್ಯಾಂಗ್ ಬುಕ್ಸ್ ಈ ಕಾದಂಬರಿಯ ‘ಇ–ಬುಕ್’ ಅವತರಣಿಕೆಯನ್ನು ಬಿಡುಗಡೆ ಮಾಡಲಾಗಿದೆ.

‘ಹೊಸ ತಂತ್ರಜ್ಞಾನದ ಜೊತೆಗೆ ಕನ್ನಡ ಹೆಜ್ಜೆ ಹಾಕಬೇಕು ಎಂಬ ದೂರದೃಷ್ಟಿ ಹೊಂದಿದ್ದ ಬರಹಗಾರ ತೇಜಸ್ವಿ. ಕನ್ನಡದ ಬಗ್ಗೆ ಸದಾ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುತ್ತಿದ್ದ ಅವರು ಇಪ್ಪತ್ತೊಂದನೇ ಶತಮಾನದಲ್ಲಿ ಬರುವ ತಂತ್ರಜ್ಞಾನದ ಬಿರುಗಾಳಿಗೆ ಎದೆ ಕೊಟ್ಟು ನಿಲ್ಲಲು ಕನ್ನಡ ಸಜ್ಜಾಗಬೇಕಾದ ರೀತಿಯ ಬಗ್ಗೆ ತುಂಬಾ ಹಿಂದೆಯೇ ಯೋಚಿಸಿ, ಚಿಂತಿಸಿ ತಮ್ಮ ಮಿತಿಯಲ್ಲಿ ಅನೇಕ ಕೆಲಸಗಳಿಗೂ ಚಾಲನೆ ಕೊಟ್ಟಿದ್ದರು. 1980ರಲ್ಲಿ ‘ಕರ್ವಾಲೊ’ ಕೃತಿಯ ಮೊದಲ ಆವೃತ್ತಿ ಪ್ರಕಟವಾಗಿತ್ತು. ಅವರ ಈ ಕೃತಿಯನ್ನು ಡಿಜಿಟಲ್ ರೂಪಕ್ಕೆ ತರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯ’ ಎನ್ನುತ್ತಾರೆ ಮೈಲ್ಯಾಂಗ್ ಬುಕ್ಸ್ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಸಂತ ಶೆಟ್ಟಿ.

‘ಕನ್ನಡ ಪುಸ್ತಕ ಓದುವ ಯುವಜನರ ಮೆಚ್ಚಿನ ಲೇಖಕ ಪೂರ್ಣಚಂದ್ರ ತೇಜಸ್ವಿ. ಅಂತಹದೊಂದು ಮಾಂತ್ರಿಕ ಸ್ಪರ್ಶ ಅವರ ಬರವಣಿಗೆಗೆ ಇದೆ. ಅವು ಎರಡು ತಲೆಮಾರಿನಿಂದಲೂ ಕನ್ನಡದ ಓದುಗರನ್ನು ಪ್ರಭಾವಿಸಿವೆ. ಡಿಜಿಟಲ್ ಮಾಧ್ಯಮ ಇಂದು ಇಷ್ಟು ವ್ಯಾಪಕವಾಗಿ ಹರಡಿದ್ದಾಗಲೂ ಅವರ ಪುಸ್ತಕಗಳು ಮುದ್ರಿತ ಆವೃತ್ತಿಗೆ ಸೀಮಿತವಾಗಿದ್ದವು. ಈ ಕೊರತೆಯನ್ನು ‘ಕರ್ವಾಲೊ’ ಇ–ಬುಕ್ ನೀಗಿಸಲಿದೆ’ ಎಂದರು.

ವಿವರಗಳಿಗೆ: www.mylang.in (ಭಾರತದಲ್ಲಿ); www.mylangbooks.com (ಹೊರದೇಶದಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.