ಬೆಂಗಳೂರು: ‘ನಮ್ಮ ಯೋಚನಾ ಶಕ್ತಿ ಹೆಚ್ಚಿಸಲು ಚೆಸ್ ಅತ್ಯುತ್ತಮ ಆಟವಾಗಿದೆ’ ಎಂದು ಕರ್ನಾಟಕದ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪ್ರಣವ್ ಆನಂದ್ ಹೇಳಿದ್ದಾರೆ.

ಕೆಎಸ್ಸಿಎ ಮತ್ತು ಬಿಯುಡಿಸಿಎ ಆಶ್ರಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಐಕ್ಯೂಎಸಿ ಸಹಯೋಗದಲ್ಲಿ ಕೋಳೂರಿನ ಯೂನಿವರ್ಸಲ್ ಕ್ಯಾಂಪಸ್ನಲ್ಲಿ ಮಕ್ಕಳ ಚೆಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ‘ಚೆಸ್ನಲ್ಲಿ ಸಾಧನೆಗೆ ನಿರಂತರ ಅಭ್ಯಾಸ ಅಗತ್ಯ’ ಎಂದರು.

ಯುಜಿಐ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ಮಾತನಾಡಿ, ‘ಚೆಸ್ ವಿಶ್ವಕ್ಕೆ ಭಾರತ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ. ಮಕ್ಕಳ ಕೌಶಲ, ಮಾನಸಿಕ ಸಾಮರ್ಥ್ಯ ಚುರುಕುಗೊಳಿಸುವುದರ ಜತೆಗೆ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೆ ಸಹಕಾರಿ’ ಎಂದು ಅಭಿಪ್ರಾಯಪಟ್ಟರು.

9ರಿಂದ -19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಯುನಿವರ್ಸಲ್ ಸಮೂಹದ ಆಡಳಿತಾಧಿಕಾರಿ ಜೆ. ಸಂತೋಷ್ ಶೆಟ್ಟಿ, ಯುನಿವರ್ಸಲ್ ಪಿಯು ಕಾಲೇಜಿನ ಪ್ರಾಂಶುಪಾಲ ನವೀನ್ ಪ್ರಸಾದ್, ಐಕ್ಯೂಎಸಿ ಸಂಯೋಜಕಿ ಸುಚಿತ್ರಾ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಜಲಕ್ ಶರ್ಮಾ, ಕೆಡಿಸಿಎ ಸಂಸ್ಥಾಪಕ ಅಧ್ಯಕ್ಷ ಜಯಪಾಲ ಚಂದಾಡಿ, ಬಿಯುಡಿಸಿಎ ಅಧ್ಯಕ್ಷೆ ಎಂ.ಯು. ಸೌಮ್ಯಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.