ಬೆಂಗಳೂರು:ಲೈಂಗಿಕ ಕಾರ್ಮಿಕರ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂಘಟನೆ ನ.25 ರಂದು 11ನೇ ವರ್ಷದ ಪ್ರೈಡ್- ಕ್ವೀರ್ ಮೆರವಣಿಗೆಯನ್ನು ಆಯೋಜಿಸಿದೆ.

ಸಂಘಟನೆಯ ಸದಸ್ಯೆ ಮೀನಾಕ್ಷಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

‘ಮಧ್ಯಾಹ್ನ 2ಕ್ಕೆ ತುಳಸಿ ಉದ್ಯಾನದಿಂದ ಪುರಭವನದವರೆಗೆ ಮೆರವಣಿಗೆ ನಡೆಯಲಿದೆ. ಸಲಿಂಗಿ, ದ್ವಿಲಿಂಗಿ, ಲಿಂಗ ಪರಿವ
ರ್ತಿತರು ಸೇರಿದಂತೆ ಸುಮಾರು 10 ಸಾವಿರ ಲೈಂಗಿಕ ಅಲ್ಪಸಂಖ್ಯಾತರು ಭಾಗವಹಿಸಲಿದ್ದಾರೆ’ ಎಂದರು.

‘ಇತರರಂತೆ ನಾವೂ ಘನತೆಯಿಂದ ಬಾಳಲು, ನಮ್ಮನ್ನು ಗೌರವದಿಂದ ಕಾಣಬೇಕು ಎಂದು ಒತ್ತಾಯಿಸಲಿದ್ದೇವೆ. ಸರ್ಕಾರ ನಮಗೆ ಉದ್ಯೋಗ ನೀಡಬೇಕು’ ಎಂದು ಒತ್ತಾಯಿಸಿದರು.

‘ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ನೀತಿ- 2017 ಅನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಕೇಂದ್ರ ಸರ್ಕಾರಸಂಪೂರ್ಣ ಮಾನ್ಯತೆ ಹಾಗೂ ಸಮಾನ ಹಕ್ಕುಗಳನ್ನು ನೀಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.