-‘ಸರ್ವರ್ ಅಳವಡಿಸಲಾಗಿದೆ. ಇಂಟರ್‌ನೆಟ್ ಇದೆ. ಸಾಫ್ಟ್‌ವೇರ್ ಪರೀಕ್ಷಾ ಹಂತದಲ್ಲಿದೆ. ಎನ್‌ಐಸಿಯಿಂದ ವಾಹನ್–4ಗೆ ಸಂಯೋಜನೆಯಾದ ಕೂಡಲೇ ಹೊಸ ಸಾಫ್ಟ್‌ವೇರ್ ಬಳಕೆಗೆ ಲಭ್ಯವಾಗಲಿದೆ. ಒಂದು ತಿಂಗಳ ಒಳಗೆ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ತಪಾಸಣೆ ಆರಂಭಗೊಳ್ಳಲಿದೆ’ ಎಂದು ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ತಿಳಿಸಿದರು. ಪೊಲ್ಯೂಶನ್ ಅಂಡರ್ ಕಂಟ್ರೋಲ್ ಸೆಂಟರ್ (ಪಿಯುಸಿಸಿ) ಎಂದು ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳನ್ನು ಕರೆಯಲಾಗುತ್ತದೆ. ವಾಹನಗಳು ಉಗುಳುವ ಹೊಗೆಯ ಪ್ರಮಾಣ ಆಧರಿಸಿ ಅವುಗಳ ಎಂಜಿನ್ ಸ್ಥಿತಿ ತಿಳಿಯಲಾಗುತ್ತದೆ. ಸದೃಢತಾ ಅವಧಿ ಮುಗಿದಿರುವ ವಾಹನಗಳನ್ನು ಮುಂದೆ ಎಷ್ಟು ಸಮಯ ಓಡಿಸಬಹುದು ಎಂಬುದು ಕೂಡ ಹೊಗೆ ತಪಾಸಣೆ ಮಾಡಿದ ಕೂಡಲೇ ಸಾಫ್ಟ್‌ವೇರ್‌ನಲ್ಲಿ ನಮೂದಾಗುತ್ತದೆ. ಬಿ1 ಬಿ2 ಬಿ3 ಹಂತದ ವಾಹನಗಳಿಗೆ ಆರು ತಿಂಗಳು ಅವಕಾಶ ಬಿ4 ಬಿ5 ಹಂತದಲ್ಲಿರುವ ವಾಹನಗಳಿಗೆ ಒಂದು ವರ್ಷ ಅವಕಾಶ ಸಿಗಲಿದೆ ಎಂದು ಮಾಹಿತಿ ನೀಡಿದರು.