ಬೆಂಗಳೂರು: ಇಲ್ಲಿನ ಪಿಇಎಸ್ ವಿಶ್ವವಿದ್ಯಾಲಯದ ವತಿಯಿಂದ ಭಾನುವಾರ ನಗರದಲ್ಲಿ ಸಮರ್ಪಣಾ ಓಟ ಆಯೋಜಿಸಲಾಗಿತ್ತು.

ಸಮರ್ಪಣಾ ಓಟದಲ್ಲಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಗೂ ಪಿಇಎಸ್ ಸಂಸ್ಥೆಯ ಹಳೇ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕರ್ನಲ್ ಎಸ್.ಎಸ್.ರಾಜನ್ ಅವರು ಓಟಕ್ಕೆ ಚಾಲನೆ ನೀಡಿದರು. ಹುತಾತ್ಮ ಯೋಧರ ತ್ಯಾಗವನ್ನು ಸ್ಮರಿಸುವ ಹಾಗೂ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಈ ಓಟ ಆಯೋಜಿಸಲಾಗಿತ್ತು. ಅಂದಾಜು 1,100 ಮಂದಿ ಓಟದಲ್ಲಿ ಪಾಲ್ಗೊಂಡಿದ್ದರು ಎಂದು ಆಯೋಜಕರು ತಿಳಿಸಿದರು.

ಓಟದ ನಂತರ ಪಿಇಎಸ್ ವಿ.ವಿಯ ‘ಆನ್ಕೋರ್’ ಹಾಗೂ ‘ಟ್ರಾನ್ಸ್’ ತಂಡಗಳು ನೀಡಿದ ನೃತ್ಯ ಪ್ರದರ್ಶನವು ವೀಕ್ಷಕರನ್ನು ರೋಮಾಂಚನಗೊಳಿಸಿತು. ಇಡೀ ಕಾರ್ಯಕ್ರಮಕ್ಕೆ ಕಲಾತ್ಮಕ ಸ್ಮರ್ಶ ನೀಡಿತು. ಇದೇ ವೇಳೆ ಹುತಾತ್ಮ ಯೋಧರ 20 ಕುಟುಂಬಗಳ ಸದಸ್ಯರನ್ನು ಗೌರವಿಸಲಾಯಿತು. ಪ್ರತಿ ಕುಟುಂಬಕ್ಕೆ ₹ 25 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಲಾಯಿತು.

ಮೇಜರ್ ಜನರಲ್ ಅನುಜ್ ಮಾಥುರ್, ಮೆಟಾಮಾರ್ಫೋಸ್ ಫೌಂಡೇಶನ್ ನಿರ್ದೇಶಕಿ ಶಕುಂತಲಾ ಭಂಡಾರ್ಕರ್, ಜೀವನ್ ಶೆಟ್ಟಿ, ರಿಜಿಸ್ಟ್ರಾರ್ ಕೆ.ಎಸ್.ಶ್ರೀಧರ್, ಡೀನ್ ವಿ.ಕೃಷ್ಣ, ಸಿವಿಲ್ ವಿಭಾಗದ ಮುಖ್ಯಸ್ಥ ಎಸ್.ವಿ.ವೆಂಕಟೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.