ಬೆಂಗಳೂರು: ಲೋಕೊ ಪೈಲೆಟ್ಗಳಿಗೆ ವಿಶ್ವಾಂತಿ ತೆಗೆದುಕೊಳ್ಳಲು 22 ರನ್ನಿಂಗ್ ರೂಂಗಳನ್ನು (ತಾತ್ಕಾಲಿಕ ವಿಶ್ರಾಂತಿ ಕೊಠಡಿ) ಸ್ಥಾಪಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಬೆಂಗಳೂರು ವಿಭಾಗದಲ್ಲಿ 191 ವಸತಿ ಸೌಕರ್ಯಗಳು ಮತ್ತು ಲೋಕೊ ಪೈಲೆಟ್ಗಳು (ರೈಲು ಚಾಲಕರು) ತಾತ್ಕಾಲಿಕ ವಿಶ್ರಾಂತಿ ಪಡೆಯಲು 4 ರನ್ನಿಂಗ್ ರೂಂಗಳಿವೆ. ಕೆಎಸ್ಆರ್ ಬೆಂಗಳೂರು, ಎಸ್ಎಂವಿಟಿ ಬೆಂಗಳೂರು, ಯಶವಂತಪುರ, ಬಂಗಾರಪೇಟೆ ರೈಲು ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇದೆ. ನೈರುತ್ಯ ರೈಲ್ವೆ ರೈಲ್ವೆ ವ್ಯಾಪ್ತಿಯಲ್ಲಿ 505 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ 14 ರನ್ನಿಂಗ್ ಕೊಠಡಿಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. 274 ಹಾಸಿಗೆಗಳ ಸಾಮರ್ಥ್ಯದ 8 ರನ್ನಿಂಗ್ ಕೊಠಡಿಗಳನ್ನು ಮಂಜೂರು ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ತ್ರೀನೇತ್ರ ಕೆ.ಆರ್. ತಿಳಿಸಿದರು.

ರೈಲ್ವೆ ಸಿಬ್ಬಂದಿ ಮೂಲ ಸ್ಟೇಷನ್ಗಳಿಂದ ದೂರವಿದ್ದಾಗ ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಈ ವ್ಯವಸ್ಥೆ ಇರುತ್ತದೆ. ಹವಾನಿಯಂತ್ರಿತ ಕೊಠಡಿ, ರಿಯಾಯಿತಿ ದರದಲ್ಲಿ ಆಹಾರ, ಅನಿಯಮಿತ ಸಮಯದಲ್ಲಿ ಪಾಳಿಗಳನ್ನು ಆರಂಭಿಸುವ ಸಿಬ್ಬಂದಿಗೆ ಆಹಾರದ ಪೊಟ್ಟಣಗಳನ್ನು ಇಲ್ಲಿ ಒದಗಿಸಲಾಗುತ್ತದೆ. ಕಾಲು ಮಸಾಜ್ ಮಾಡುವ ಮಷಿನ್, ಚೆಸ್, ಕೇರಂ ಬೋರ್ಡ್ ಸೌಕರ್ಯಗಳಿವೆ ಎಂದು ವಿವರಿಸಿದರು.

ನಿಗದಿತ ವಿಶ್ರಾಂತಿ ಅವಧಿ ಪೂರ್ಣಗೊಳಿಸುವವರೆಗೆ ಯಾವುದೇ ರನ್ನಿಂಗ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಕರೆಯುವುದಿಲ್ಲ. ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಈ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.