ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ಮಳೆಯಾಗಿದ್ದು, ಹಲವೆಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ನೀರು ರಸ್ತೆಯಲ್ಲೇ ಹರಿಯಿತು.

ಜಯನಗರ, ಹೆಬ್ಬಾಳ, ಎಂ.ಜಿ. ರಸ್ತೆ, ಶಿವಾಜಿನಗರ, ಯಶವಂತಪುರ, ಹಂಪಿನಗರ, ಕೋರಮಂಗಲ, ಜ್ಞಾನಭಾರತಿ, ವಿವಿ ಪುರ, ಗಾಂಧಿನಗರ, ರಾಜಾಜಿನಗರ ಸಹಿತ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯಿತು.

ಆಟೊ ಮೇಲೆ ಉರುಳಿದ ಮರ: ವಿಜಯನಗರದ ಎಂ.ಸಿ. ಬಡಾವಣೆಯಲ್ಲಿ ಬೃಹದಾಕಾರದ ಮರವೊಂದು ಚಲಿಸುತ್ತಿದ್ದ ಆಟೊ ಮೇಲೆ ಉರುಳಿಬಿದ್ದಿತು. ಆಟೊ ಸಂಪೂರ್ಣವಾಗಿ ಜಖಂಗೊಂಡಿದೆ. ಆಟೊದಲ್ಲಿದ್ದ ಚಾಲಕ ಮತ್ತು ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಸರ್ವಜ್ಞ ಜಂಕ್ಷನ್ ಬಳಿ ರಸ್ತೆಗೆ ಅಡ್ಡವಾಗಿ ಮರ ಬಿದ್ದಿರುವುದರಿಂದ ಬಿಜಿಎಸ್ ಗ್ರೌಂಡ್ ಕಡೆಗೆ ಹೋಗುವ ವಾಹನಗಳಿಗೆ ಅಡಚಣೆ ಉಂಟಾಯಿತು.

ಸಾಗರ್ ಜಂಕ್ಷನ್ ಬಳಿ ನೀರು ನಿಂತಿದ್ದರಿಂದ ಡೇರಿ ಸರ್ಕಲ್ ಕಡೆಗೆ ಸಾಗುವ ವಾಹನಗಳಿಗೆ ತೊಡಕುಂಟಾಯಿತು. ಕೆಂಪಾಪುರದ ಬಳಿ ರಸ್ತೆಯೇ ಚರಂಡಿಯಂತಾಗಿದ್ದರಿಂದ ಹೆಬ್ಬಾಳದ ಮೇಲ್ಸೇತುವೆ ಕಡೆಗೆ ವಾಹನಗಳು ಸಾಗಲು ಅಡ್ಡಿಯಾಯಿತು. ವೀರಣ್ಣಪಾಳ್ಯ ಬಳಿ ನೀರು ನಿಂತು ಜನರು, ವಾಹನ ಸವಾರರು ಪರದಾಡಿದರು. ಕುವೆಂಪು ಸಿಗ್ನಲ್ ಬಳಿ ರಸ್ತೆಯಲ್ಲಿ ನೀರು ನಿಂತು ಭದ್ರಪ್ಪ ಲೇಔಟ್ ಕಡೆಗೆ ಸಂಚಾರ ನಿಧಾನವಾಗಿದ್ದರಿಂದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತವು.

ಮಳೆ ವಿವರ: ವಿದ್ಯಾಪೀಠ 2.5 ಸೆಂ.ಮೀ., ಕೊಡಿಗೆಹಳ್ಳಿ 2.4 ಸೆಂ.ಮೀ., ನಾಯಂಡಹಳ್ಳಿ 2.2 ಸೆಂ.ಮೀ., ವಿದ್ಯಾರಣ್ಯಪುರ 2.1 ಸೆಂ.ಮೀ., ಯಲಹಂಕ 1.8 ಸೆಂ.ಮೀ., ರಾಜರಾಜೇಶ್ವರಿನಗರ 1.7 ಸೆಂ.ಮೀ., ವಿಶ್ವನಾಥ ನಾಗೇನಹಳ್ಳಿ 1.4 ಸೆಂ.ಮೀ., ವಿಶ್ವೇಶ್ವರಪುರ 1.2 ಸೆಂ.ಮೀ., ಮಾರುತಿ ಮಂದಿರ 1.1 ಸೆಂ.ಮೀ., ಹೆರೋಹಳ್ಳಿ 1 ಸೆಂ.ಮೀ. ಮಳೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.