ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಸ್ಕಾನ್ ಸಂಸ್ಥೆಯು ವಿಶಿಷ್ಟವಾಗಿ ವಿಜಯದಶಮಿ ಆಚರಿಸಿತು.

ರಾಮಾಯಣ ವೇಷಭೂಷಣ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು. ನೋಡುಗರ ಗಮನ ಸೆಳೆದರು. ರಾಮ, ಸೀತೆ, ಹನುಮಂತ ಸೇರಿದಂತೆ ವಿವಿಧ ವೇಷ ತೊಟ್ಟಿದ್ದ ಮಕ್ಕಳು ಕಾರ್ಯಕ್ರಮದ ಕಳೆ ಹೆಚ್ಚಿಸಿದರು.

ಇದೇ ಸಂದರ್ಭದಲ್ಲೇ ಭಜನೆ ಮತ್ತು ರಾಮತಾರಕ ಯಜ್ಞ ಕೂಡಾ ನಡೆಯಿತು. ನೆರೆದಿದ್ದ ಭಕ್ತರು ಸಾಮೂಹಿಕವಾಗಿ ಶ್ರೀರಾಮನ ನಾಮ ಸ್ಮರಣೆ ಮಾಡಿದರು.

ಅನಂತರ ಗಾಯಕ ವಿಜಯ್ ಪ್ರಕಾಶ್ ಹಾಗೂ ತಂಡದವರು ಭಕ್ತಿ ಸಂಗೀತ ಕಾರ್ಯಕ್ರಮನಡೆಸಿಕೊಟ್ಟರು .

50 ಅಡಿ ಎತ್ತರದ ರಾವಣ– ಕುಂಭಕರ್ಣ ಪ್ರತಿಕೃತಿಗಳನ್ನು ಸುಡುವ ಮೂಲಕ, ಆ ಎರಡು ವ್ಯಕ್ತಿತ್ವಗಳ ಕೆಟ್ಟ ಗುಣಗಳನ್ನು ತ್ಯಜಿಸೋಣ ಎಂಬ ಸಂದೇಶ ಸಾರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.