ಬೆಂಗಳೂರು: ಪಾದರಾಯನಪುರದಲ್ಲಿ ದಾಂಧಲೆ ನಡೆಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ 126 ಮಂದಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಅವರನ್ನು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮದೇ ಬಸ್ಗಳಲ್ಲಿ ಹಜ್ ಭವನದಿಂದ ಪಾದರಾಯನಪುರಕ್ಕೆ ಕರೆದುಕೊಂಡು ಬಂದರು.

ನ್ಯಾಷನಲ್ ಟ್ರಾವೆಲ್ಸ್ನ ಮೂರು ಬಸ್ಗಳಲ್ಲಿ ಆರೋಪಿಗಳು ಬರುತ್ತಿದ್ದಂತೆ ತಮ್ಮವರನ್ನು ಸ್ವಾಗತಿಸಲು ಹಳೆ ಗುಡ್ಡದಹಳ್ಳಿಯಲ್ಲಿ ಸ್ಥಳೀಯರು ಕಿಕ್ಕಿರಿದು ಸೇರಿದ್ದರು. ಜನರನ್ನು ಪೊಲೀಸರು ಚದುರಿಸಿದರು. ಜೆ.ಜೆ.ನಗರ ವಾರ್ಡ್ ಕಾರ್ಪೋರೇಟರ್ ಪತಿ ಅಲ್ತಾಫ್ ಖಾನ್ ಕೂಡಾ ಇದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳಿಗೆ ಹೈಕೋರ್ಟ್ ಸೋಮವಾರ ಜಾಮೀನು ನೀಡಿತ್ತು. ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿದೆ. ಆರೋಪಿಗಳು ₹ 1 ಲಕ್ಷದ ಶ್ಯೂರಿಟಿ ಬಾಂಡ್ ನೀಡಬೇಕು. ಎಲ್ಲರೂ ಕೊರೊನಾ ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೆ, ಕೊರೊನಾ ಮಾರ್ಗಸೂಚಿ ಪಾಲಿಸಬೇಕು. ಇಲ್ಲದಿದ್ದರೆ ಜಾಮೀನು ರದ್ದು ಮಾಡಲಾಗುವುದು ಎಂಬ ಷರತ್ತುಗಳನ್ನು ವಿಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.