ಬೆಂಗಳೂರು: ಎರಡು ದಶಕಗಳ ಹಿಂದೆ ಕೆಂಪು ಗ್ರಹದಲ್ಲಿ ನೀರಿನ ಕುರುಹು ಇದೆಯೇ ಎಂಬುದನ್ನು ಪತ್ತೆ ಹಚ್ಚಲು ನಾಸಾ ಕಳುಹಿಸಿದ್ದ ‘ಮಾರ್ಸ್ ಆಪರ್ಚುನಿಟಿ ರೋವರ್’ ಇದರ ಪೂರ್ಣ ಪ್ರಮಾಣದ ಪ್ರತಿಕೃತಿಯು ಇಲ್ಲಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ (ವಿಐಟಿಎಂ) ಬಂದಿಳಿದಿದೆ.

ಯು.ಎಸ್. ಅಂಡರ್ ಸೆಕ್ರೆಟರಿ ಆಫ್ ಕಾಮರ್ಸ್ ಫಾರ್ ಇಂಟರ್ ನ್ಯಾಷನಲ್ ಟ್ರೇಡ್ ಮರಿಸಾ ಲಾಗೊ, ಚನ್ನೈನ ಯು.ಎಸ್. ಕಾನ್ಸಲ್ ಜನರಲ್ ಜುಡಿತ್ ರೇವಿನ್, ಬೆಂಗಳೂರಿನಲ್ಲಿರುವ ಯು.ಆರ್. ರಾವ್ ಸ್ಯಾಟಲೈಟ್ ಸೆಂಟರ್‌ನ ನಿರ್ದೇಶಕ ಡಾ.ಎಂ. ಶಂಕರನ್, ಜೆಟ್ ಪ್ರೊಪಲ್ಶನ್ ಲ್ಯಾಬೋರಟರಿಯ ನಿಸಾರ್ ಮಿಷನ್ ಸಿಸ್ಟಂ ಮ್ಯಾನೇಜರ್ ಆನ ಮರಿಯ ಗುರ‍್ರೆರೊ ಅವರು ವಿಐಟಿಎಂ ಗುರುವಾರ ಪ್ರತಿಕೃತಿ ಅನಾವರಣ ಮಾಡಿದರು.

ಹಿಂದೆ ಮಾರ್ಸ್ ಆಪರ್ಚುನಿಟಿ ರೋವರ್‌ನ ಪೂರ್ಣಪ್ರಮಾಣದ ಮಾದರಿಯನ್ನು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೂಪಿಸಿದ್ದರು. ಅಮೆರಿಕದ ವರ್ಜಿನಿಯದ ಡಲ್ಲಾಸ್‌ನಲ್ಲಿರುವ ಸ್ಮಿತ್‌ಸೋನಿಯನ್ ಅವರ ಏರ್ ಆ್ಯಂಡ್ ಸ್ಪೇಸ್ ಮ್ಯೂಸಿಯಂನಲ್ಲಿ, 2020ರ ದುಬೈ ವರ್ಲ್ಡ್ ಎಕ್ಸ್‌ಪೊದಲ್ಲಿ ಮತ್ತು ಚೆನ್ನೈ ದೂತಾವಾಸದ ಅಮೆರಿಕನ್ ಸೆಂಟರ್‌ನಲ್ಲಿ ಪ್ರದರ್ಶಿಸಲಾಗಿತ್ತು.

‘ಸೂಕ್ಷ್ಮ ವಲಯಗಳಲ್ಲಿ ಅಮೆರಿಕ ಮತ್ತು ಭಾರತದ ಸಹಕಾರ ಇನ್ನಷ್ಟು ನಿಕಟವಾಗಿದೆ. ಬಾಹ್ಯಾಕಾಶ ವಲಯವು ನಮ್ಮ ಸಹಭಾಗಿತ್ವಕ್ಕೆ ಮತ್ತೊಂದು ಉದಾಹರಣೆ’ ಎಂದು ಯು.ಎಸ್. ಅಂಡರ್ ಸೆಕ್ರೆಟರಿ ಆಫ್ ಕಾಮರ್ಸ್ ಫಾರ್ ಇಂಟರ್ ನ್ಯಾಷನಲ್ ಟ್ರೇಡ್ ಮರಿಸಾ ಲಾಗೊ ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.