ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಲೇಷ್ಯಾದಿಂದ ಟ್ರಾಲಿ ಬ್ಯಾಗ್ಗಳಲ್ಲಿ ಹೊತ್ತು ತಂದಿದ್ದ 40 ಅಪರೂಪದ ವನ್ಯಜೀವಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ರಕ್ಷಿಸಿದ್ದಾರೆ.

ಕ್ವಾಲಾಲಂಪುರದಿಂದ ಮಲೇಷ್ಯಾ ಏರ್ಲೈನ್ಸ್ ಎಂಎಚ್ 0192 ವಿಮಾನದ ಮೂಲಕ ಬೆಂಗಳೂರಿಗೆ ಗುರುವಾರ ತಡರಾತ್ರಿ ಬಂದಿಳಿದ ಪ್ರಯಾಣಿಕರಿ ಬ್ಬರು ಅಕ್ರಮವಾಗಿ ವನ್ಯಜೀವಿಗಳನ್ನು ಸಾಗಣೆ ಮಾಡುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಡಾಬ್ರಾ ದೊಡ್ಡ ಆಮೆಗಳು, ಕೆಂಪು ಪಾದದ ಆಮೆಗಳು, ದೇಹದ ಮೇಲೆ ಮಣಿಗಳಿರುವ ಹಲ್ಲಿಗಳು, ಖಡ್ಗಮೃಗ ಮರಿಗಳು, ಅಪರೂಪದ ಅಲ್ಬಿನೋ ಬಾವಲಿ, ಶಿಂಗಲ್ ಬ್ಯಾಕ್ ಸ್ಕಿಂಕ್ ಪ್ರಾಣಿಗಳು, ಮೊಸಳೆ ಮರಿಗಳು, ಮರಿ ಚುಕ್ಕೆ ಆಮೆಗಳು, ಗಿಬ್ಬಾನ್ ಸೇರಿದಂತೆ ವಿದೇಶಿ ಪ್ರಾಣಿಗಳನ್ನು ಬಂಧಿತರಿಂದ ರಕ್ಷಿಸಲಾಗಿದೆ. ಆರೋಪಿತರು ಎರಡು ಟ್ರಾಲಿ ಬ್ಯಾಗ್ಗಳಲ್ಲಿ ಪ್ರಾಣಿಗಳನ್ನು ಸಾಗಿಸುತ್ತಿದ್ದು ಒಂದು ಬ್ಯಾಗ್ನಲ್ಲಿ 24 ಪ್ರಾಣಿಗಳು ಹಾಗೂ ಮೊತ್ತೊಂದರಲ್ಲಿ 16 ಪ್ರಾಣಿಗಳನ್ನು ಸಾಗಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.