ಬೆಂಗಳೂರು: ‘ನಿವೃತ್ತ ಐಎಎಸ್ ಅಧಿಕಾರಿ ರಾಮಚಂದ್ರ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ತಿಲಕ್ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರತಿದೂರು ನೀಡಿರುವ ರಾಮಚಂದ್ರ, ‘ಅತ್ಯಾಚಾರದ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವ ಮಹಿಳೆ ₹ 10 ಕೋಟಿ ನೀಡುವಂತೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ತಿಲಕ್ನಗರ ಪೊಲೀಸರು, ‘ರಾಮಚಂದ್ರ ಹಾಗೂ ಮಹಿಳೆ ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಎರಡು ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದರು.

ಆರೈಕೆ ಕೆಲಸದಿಂದ ಪರಿಚಯ: ‘ರಾಮಚಂದ್ರ ಪತ್ನಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಪತ್ನಿಯ ಆರೈಕೆ ಮಾಡುವ ಕೆಲಸಕ್ಕೆಂದು ಮಹಿಳೆಯೊಬ್ಬರನ್ನು ಕಳುಹಿಸಿದ್ದ ಸಂತ್ರಸ್ತೆ, ರಾಮಚಂದ್ರ ಅವರನ್ನು ಪರಿಚಯ ಮಾಡಿಕೊಂಡಿದ್ದರು. ನಂತರ, ಇಬ್ಬರ ನಡುವೆ ಸಲುಗೆ ಏರ್ಪಟ್ಟಿತ್ತು. ಇಬ್ಬರೂ ಪರಸ್ಪರ ಒಪ್ಪಿ ಸಹಜೀವನ ನಡೆಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಾಮಚಂದ್ರ ಅವರಿಂದ ₹ 20 ಲಕ್ಷ ಪಡೆದಿದ್ದ ಮಹಿಳೆ, ಅದನ್ನು ವಾಪಸು ಕೊಟ್ಟಿರಲಿಲ್ಲ. ಇತ್ತೀಚೆಗೆ ಲ್ಯಾಬ್ ವರದಿ ತೋರಿಸಿದ್ದ ಸಂತ್ರಸ್ತೆ, ತಾವು ಗರ್ಭಿಣಿ ಎಂಬುದಾಗಿ ಹೇಳಿದ್ದರು. ರಾಮಚಂದ್ರ ಅವರೇ ತಂದೆ ಎಂಬುದಾಗಿ ತಿಳಿಸಿದ್ದರು. ಸಂತ್ರಸ್ತೆ ಹಾಗೂ ಅವರ ಸಂಬಂಧಿಕರು, ರಾಮಚಂದ್ರ ಜೊತೆ ಗಲಾಟೆ ಮಾಡಿದ್ದರು. ಜೀವನಾಂಶಕ್ಕೆ ₹ 10 ಕೋಟಿ ನೀಡಬೇಕೆಂದು ಬೇಡಿಕೆ ಇರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಹೆದರಿದ್ದ ರಾಮಚಂದ್ರ, ₹ 50 ಲಕ್ಷ ನೀಡಿದ್ದರು. ಅದಾದ ನಂತರವೂ ಸಂತ್ರಸ್ತೆ ಹಾಗೂ ಇತರರು ಹಣ ಕೇಳಿದ್ದರು. ನೊಂದ ರಾಮಚಂದ್ರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಮಹಿಳೆ ಸಹ ದೂರು ಕೊಟ್ಟಿದ್ದಾರೆ. ‘ಮತ್ತು ಬರುವ ಔಷಧಿ ಬೆರೆಸಿದ್ದ ಆಹಾರವನ್ನು ತಿನ್ನಿಸಿ ಪ್ರಜ್ಞೆ ತಪ್ಪಿಸಿದ್ದ ರಾಮಚಂದ್ರ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂಬುದಾಗಿ ಆರೋಪಿಸಿದ್ದಾರೆ. ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.