ಬೆಂಗಳೂರು: ಮಾರುವೇಷದಲ್ಲಿ ಮನೆಗಳಿಗೆ ನುಗ್ಗಿ ಪಿಸ್ತೂಲ್ ತೋರಿಸಿ ಬೆದರಿಸಿ ಚಿನ್ನಾಭರಣ, ನಗದು ದೋಚುತ್ತಿದ್ದ ‘ಉತ್ತರ ಪ್ರದೇಶ ಗ್ಯಾಂಗ್’ನ ಇಬ್ಬರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಜಾಫರ್ ಅಸ್ಗರ್ ಅಲಿ ಹಾಗೂ ಅರ್ಮಾನ್ ಮಲ್ಲಿಕ್ ಬಂಧಿತರು. ಫಹೀಂ ಅಲಿಯಾಸ್ ಫಹೀಂ ‘ಎಟಿಎಂ’ ತಂಡದಲ್ಲಿ ಈ ಇಬ್ಬರೂ ಗುರುತಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನ ಪ್ರಕರಣವೊಂದರಲ್ಲಿ ಇಬ್ಬರನ್ನೂ ಛತ್ತೀಸ್ಗಡ, ವಿಶಾಖಪಟ್ಟಣದ ಪೊಲೀಸರು ಇತ್ತೀಚೆಗೆ ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಬಾಡಿ ವಾರಂಟ್ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದು ಮತ್ತೆ ಬಂಧಿಸಲಾಗಿದೆ. ಇಬ್ಬರೂ ನಗರದ ವಿವಿಧೆಡೆ ಅಪರಾಧ ಕೃತ್ಯ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

‘ಫಹೀಂ ಸೇರಿದಂತೆ ಐವರು ಆರೋಪಿಗಳು, ಏಪ್ರಿಲ್ 24ರಂದು ಸಹಕಾರ ನಗರದ ನಿವಾಸಿ, ವೈದ್ಯ ಉಮಾಶಂಕರ್ ಅವರ ಮನೆಗೆ ನುಗ್ಗಿ ₹40 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರಿಗೆ ‘ಉತ್ತರ ಪ್ರದೇಶದ ಗ್ಯಾಂಗ್’ ಕೃತ್ಯ ಎಸಗಿರುವುದು ಗೊತ್ತಾಗಿತ್ತು. ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಫಹೀಂ ಎಟಿಎಂಗಳನ್ನೇ ದರೋಡೆ ಮಾಡುತ್ತಿದ್ದ ಕಾರಣಕ್ಕೆ ಆತನಿಗೆ ಫಹೀಂ ‘ಎಟಿಎಂ’ ಹೆಸರು ಬಂದಿತ್ತು.

‘ಆರೋಪಿಗಳು ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಪಿಸ್ತೂಲ್ ತೋರಿಸಿ ದರೋಡೆ ನಡೆಸಿದ್ದಾರೆ. ಮಾರುವೇಷದಲ್ಲಿ ಚಿನ್ನಾಭರಣ ದೋಚಿ ಪರಾರಿ ಆಗುತ್ತಿದ್ದರು. ಮನೆ ಮಾಲೀಕರು ಎದುರಾದರೆ ಪಿಸ್ತೂಲ್ ತೋರಿಸಿ ಬೆದರಿಸುತ್ತಿದ್ದರು. ಕೊಡಿಗೇಹಳ್ಳಿಯಲ್ಲಿ ಎರಡು ಹಾಗೂ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಮೂರು ಮನೆಗಳಲ್ಲಿ ದರೋಡೆ ನಡೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ದರೋಡೆ ಮಾಡಿದ ಹಣದಲ್ಲಿ ಗೋವಾಕ್ಕೆ ತೆರಳಿ ಕ್ಯಾಸಿನೊದಲ್ಲಿ ಮೋಜು ಮಾಡುತ್ತಿದ್ದರು. ಹಣ ಖಾಲಿ
ಆದ ಮೇಲೆ ಮತ್ತೆ ದರೋಡೆ ನಡೆಸುತ್ತಿದ್ದರು. ಬಂಧಿತರ ವಿರುದ್ಧ ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸ್ಗಡ ಸೇರಿ ವಿವಿಧ ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿವೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.