ಬೆಂಗಳೂರು: ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ವಿಜಯನಗರದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಜಾಗೃತಿ ಓಟ ನಡೆಯಿತು.

ಬಿಜಿಎಸ್ ಮೈದಾನದಲ್ಲಿ ಜಾಗೃತಿ ಓಟಕ್ಕೆ ಲಯನ್ಸ್ ಗವರ್ನರ್ ಎನ್. ಮೋಹನ್ ಕುಮಾರ್ ಚಾಲನೆ ನೀಡಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ವಯಸ್ಕರಲ್ಲಿ ಮಾತ್ರವಲ್ಲ, ಚಿಕ್ಕ ವಯಸ್ಸಿನವರಲ್ಲಿಯೂ ಮಧುಮೇಹ ಸಾಮಾನ್ಯವಾಗಿಬಿಟ್ಟಿದೆ. ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ ಮುಖ್ಯ ಕಾರಣಗಳಾಗಿವೆ. ಜೊತೆಗೆ ಮಧುಮೇಹ ನಿಯಂತ್ರಣ ಮಾಡುವ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದಿರುವುದು ಕೂಡ ಕಾರಣ’ ಎಂದು ಹೇಳಿದರು.

‘ಯುವ ಪೀಳಿಗೆ ಮಧುಮೇಹಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಬೇಕಾಗಿದೆ. ಯುವಜನರಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಬೇಕಿದೆ’ ಎಂದು ತಿಳಿಸಿದರು.

ಓಟದಲ್ಲಿ ಯುವಕರು, ವೃದ್ಧರು, ಮಹಿಳೆಯರು, ಲಯನ್ಸ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ವೈದ್ಯ ಡಾ. ಕೃಷ್ಣೇಗೌಡ ಎನ್., ಕೆ. ದೇವೇಗೌಡ, ಜಿ. ಮೋಹನ್, ಕೆ. ಈಶ್ವರನ್, ಮನೋಜ್ ಕುಮಾರ್, ಅಶೋಕ್ ಕುಮಾರ್ ಕುಲಕರ್ಣಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.