ಬೆಂಗಳೂರು: ‘ಹೆಸರಿನ ಹಿಂದೆ ಪದ್ಮ ಗೌರವ ಹಾಗೂ ಭಾರತ ರತ್ನವನ್ನು ಸೇರಿಸಿಕೊಳ್ಳುವುದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧ. ಹಾಗಾಗಿ ಈ ರೀತಿ ಯಾರೇ ಬಳಸಿದರೂ ಅವರಿಗೆ ನೀಡಿದ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು’ ಎಂದುನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದರು.

ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಗುರುವಾರ ಆಯೋಜಿಸಿದ್ದ ‘ಪುರಂದರ, ತ್ಯಾಗರಾಜರ, ಕನಕದಾಸರ ಆರಾಧನಾ ಮಹೋತ್ಸವ’ದಲ್ಲಿ ಮಾತನಾಡಿದರು.

‘ಸಾಧಕರಿಗೆ ನೀಡುವಭಾರತ ರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಗೌರವ ಸೂಚಕವಾಗಿ ಹೆಸರಿನ ಜತೆಗೆ ಬಳಕೆ ಮಾಡಲಾಗುತ್ತಿದೆ. 1996ರಲ್ಲಿಯೇ ಸುಪ್ರೀಂ ಕೋರ್ಟ್ ಈ ರೀತಿ ಬಳಕೆ ಮಾಡಬಾರದು ಎಂದು ತೀರ್ಪು ನೀಡಿತ್ತು. ಆದರೆ, ಈ ತೀರ್ಪನ್ನು ಯಾರೂ ಪಾಲಿಸುತ್ತಿಲ್ಲ. ಅದೇ ರೀತಿ, ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟ್ ಅನ್ನೂ ಹೆಸರಿನ ಜತೆಗೆ ಸೇರಿಸಿಕೊಳ್ಳಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.