ಹೈದರಾಬಾದ್: ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಮಂಗಳವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಯು.ಪಿ. ಯೋಧಾಸ್ ವಿರುದ್ಧ ರೋಚಕ ಜಯ ಸಾಧಿಸಿತು.

ಲೀಗ್ ಹಂತದ 35ನೇ ಪಂದ್ಯದಲ್ಲಿ ಪ್ಯಾಂಥರ್ಸ್ ತಂಡವು 33–30ರಿಂದ ಗೆದ್ದಿತು. ಪಂದ್ಯದ ಅಂತಿಮ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಯೋಧಾಸ್ ತಂಡವನ್ನು ಮಣಿಸಿತು. ಮೂರು ಪಂದ್ಯಗಳ ನಂತರ ಮತ್ತೆ ಜಯದ ಹಾದಿಗೆ ಮರಳಿತು. ಯೋಧಾಸ್ ತಂಡದ ಭರತ್ (7 ಅಂಕ), ಹಿತೇಶ್ (5 ಅಂಕ), ನಾಯಕ ಸುಮಿತ್ (5) ಅಂಕ ಗಳಿಸಿದರು. ಅತ್ತ ಪ್ಯಾಂಥರ್ಸ್ ಪರ ನೀರಜ್ ನರ್ವಾಲ್ (9 ಅಂಕ), ರೇಜಾ (5 ಅಂಕ) ಮತ್ತು ಅರ್ಜುನ್ ದೇಶ್ವಾಲ್ (5 ಅಂಕ) ಗಮನ ಸೆಳೆದರು.

ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 35ನೇ ನಿಮಿಷದಲ್ಲಿ ಮಹೇಂದರ್ ಸಿಂಗ್ ಮತ್ತು ಭರತ್ ಅವರನ್ನು ಔಟ್ ಮಾಡಿದ ನೀರಜ್ ಜೈಪುರ ಹೋರಾಟವನ್ನು ಮತ್ತೆ 27- 27ರ ಸಮಸ್ಥಿತಿಗೆ ತಂದರು. ಹೀಗಾಗಿ ಪಂದ್ಯ ತೀವ್ರ ರೋಚಕ ಘಟ್ಟಕ್ಕೆ ಹೋಯಿತು. 38ನೇ ನಿಮಿಷದಲ್ಲಿಎರಡನೇ ಬಾರಿ ಯೋಧಾಸ್ ತಂಡವನ್ನು ಆಲೌಟ್ ಮಾಡಿದ ಜೈಪುರ, 32-28ರಲ್ಲಿಮುನ್ನಡೆ ಸಾಧಿಸಿ ಗೆಲುವಿನತ್ತ ಮುನ್ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.