ಬೆಂಗಳೂರು: ’ಭಾರತದ ಏಕೀ ಕರಣಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆ ಅಪಾರ. ಸ್ವಾತಂತ್ರ್ಯಕ್ಕಾಗಿಹೋರಾಡಿದ ಇಂತಹ ಮಹನೀಯರ ದಿನಾಚರಣೆಗಳು ನಡೆಯಬೇಕು’ ಎಂದು ಗಾಂಧಿವಾದಿ ವೇಮಗಲ್ ಸೋಮಶೇಖರ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ
ಇತಿಹಾಸ ಮತ್ತು ವಸ್ತು ಸಂಗ್ರಹಾಲಯ ಹಾಗೂ ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನ ಹಾಗೂ ಅವರ ಕೊಡುಗೆಗಳನ್ನು ಸ್ಮರಿಸುವ 'ಸರ್ದಾರ್ ಪಟೇಲ್-ಏಕೀಕರಣದ ಶಿಲ್ಪಿ' ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದ ರಾಜಕಾರಣದ ಇತಿಹಾಸದಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ವಿಶೇಷ ಸ್ಥಾನಮಾನವಿದೆ’ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ್.ಎಸ್.ಎಂ ಮಾತನಾಡಿ, ‘ಪಟೇಲರ ವ್ಯಕ್ತಿತ್ವ ಇಂದಿನ ಯುವಕರಿಗೆ ಆದರ್ಶ’ ಎಂದು ಹೇಳಿದರು.

ಇದೇ ವೇಳೆ ಸರ್ದಾರ್ ವಲ್ಲಭಭಾಯಿ ಪಟೇಲರ ಕುರಿತು ಛಾಯಾಚಿತ್ರ ಹಾಗೂ ಕಿರುಚಿತ್ರ ಪ್ರದರ್ಶನ ಮಾಡಲಾಯಿತು.

ಕುಲಸಚಿವ ಎನ್.ಮಹೇಶ್‌ಬಾಬು, ಇತಿಹಾಸ ವಿಭಾಗದ ಮುಖ್ಯಸ್ಥೆ
ಡಾ. ವಿಜಯಲಕ್ಷ್ಮಿ, ಸಂಯೋಜಕರಾದ ಡಾ.ನಾಗರತ್ನಮ್ಮ, ಡಾ.ಶ್ರೀಪತಿ, ಉಪನ್ಯಾಸಕರಾದ ಡಾ.ಉಷಾದೇವಿ, ಡಾ.ಶೇಕ್ ಮಸ್ತಾನ್, ಡಾ.ಶಶಿಧರ್, ಡಾ.ರಾಜೇಶ್ವರಿ, ಡಾ.ವಾಹಿನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.