ಬೆಂಗಳೂರು: ‘ಶಿವಕುಮಾರ ಸ್ವಾಮೀಜಿ ಅವರು ಪದವಿ, ಪ್ರಶಸ್ತಿಗಳಿಗೆ ಎಂದೂ ಆಸೆ ಪಡಲಿಲ್ಲ. ಜೀವನದುದ್ದಕ್ಕೂ ತಮ್ಮ ದೇಹವನ್ನು ಸವೆಸಿ ನಾಡಿಗೆ ಬೆಳಕಾದರು’ ಎಂದು ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಶಿವಕುಮಾರಸ್ವಾಮಿ ಚಾರಿಟಬಲ್ ಟ್ರಸ್ಟ್ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜಾಜಿನಗರ ಪ್ರವೇಶ ದ್ವಾರದ ಬಳಿ ಸ್ಥಾಪಿಸಲಾದ ಶಿವಕುಮಾರ ಸ್ವಾಮೀಜಿ ಅವರ ಕಂಚಿನ ಪುತ್ಥಳಿ ಲೋಕಾರ್ಪಣೆ ಮಾಡಲಾಯಿತು.

ಈ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಶಿವಕುಮಾರ ಸ್ವಾಮೀಜಿ ಅವರ ಬದುಕು ತ್ಯಾಗದಿಂದ ಕೂಡಿತ್ತು. ಪೂಜೆ, ಸೇವೆಯ ಪ್ರತಿಫಲದಿಂದ ಅವರು 111 ವರ್ಷ ಬದುಕಿದರು. ಅವರು ಪ್ರತಿಯೊಂದು ಕೆಲಸವನ್ನು ಶ್ರದ್ಧೆ, ಭಕ್ತಿಯಿಂದ ಮಾಡುತ್ತಿದ್ದರು. ಗ್ರಾಮೀಣ ಭಾಗದಲ್ಲಿಯೂ ಶಾಲೆಗಳನ್ನು ಆರಂಭಿಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾದರು. ಜಾತಿ, ಮತದ ಭೇದಭಾವ ನೋಡದೆ ಎಲ್ಲ ಜಾತಿಯ ಮಕ್ಕಳಿಗೆ ಆಶ್ರಯ ನೀಡಿ, ಸಂಸ್ಕೃತ ಭಾಷೆಯನ್ನು ಎಲ್ಲರಿಗೂ ಕಲಿಸಿದರು’ ಎಂದು ಹೇಳಿದರು.

ಗದಗದ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ‘ಶಿವಕುಮಾರ ಸ್ವಾಮೀಜಿ ಅವರು ಬಿಟ್ಟು ಹೋದ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಎಲ್ಲರೂ ನಮ್ಮವರೇ ಎಂದು ಭಾವಿಸಿದ್ದರು. ಆದರ್ಶ ಜೀವನ, ಸಮಾಜಮುಖಿ ಸೇವೆಯಿಂದಾಗಿ ‘ನೆಡದಾಡುವ ದೇವರು’ ಎಂಬ ಕೀರ್ತಿಗಳಿಸಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.