ಬೆಂಗಳೂರು: ಉಪನಗರ ರೈಲು ಯೋಜನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ (ಸಿಸಿಇಎ) ಅನುಮೋದನೆ ಬಾಕಿ ಇದ್ದು, ಈ ನಡುವೆ ಯೋಜನೆಗೆ ಬೇಕಿರುವ ಭೂಮಿ ಸರ್ವೆ ನಡೆಸಲು ಸಿದ್ಧತೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ.

ಈ ಯೋಜನೆಯನ್ನು ಕೈಗೆತ್ತಿಕೊಂಡಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ–ರೈಡ್), ಸರ್ವೆ ನಡೆಸಲು ಆಸಕ್ತ ಏಜೆನ್ಸಿಗಳನ್ನು ಆಹ್ವಾನಿಸಿದೆ.

ಯೋಜನೆಗೆ ಅಗತ್ಯ ಇರುವ ಭೂಮಿ ಸರ್ವೆ ಮಾಡಿಕೊಡಲು ₹62.79 ಲಕ್ಷ, ಉದ್ದೇಶಿತ 150 ಕಿ.ಮೀ ರೈಲು ಮಾರ್ಗದಲ್ಲಿ ಈಗಾಗಲೇ ಇರುವ ಮೂಲಸೌಕರ್ಯ (ಕುಡಿಯುವ ನೀರಿನ ಪೈಪ್‌ಲೈನ್, ಒಳಚರಂಡಿ ಪೈಪ್‌ಲೈನ್, ವಿದ್ಯುತ್ ಸಂಪರ್ಕದ ಕಂಬ ಅಥವಾ ತಂತಿಗಳು) ಎಷ್ಟಿವೆ ಎಂಬುದನ್ನು ಗುರುತಿಸಲು ₹1.10 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.